
ಕೋಟ: ಒಳ್ಳೆಯ ಉದ್ದೇಶ ವ್ಯಕ್ತಿಗಳನ್ನು ಬಹು ಎತ್ತರಕ್ಕೆ ಕೊಂಡ್ಯೋಯಬಲ್ಲದು ಇದಕ್ಕೆ ಇಲ್ಲಿನ ಈ ಕೊಸ್ಟಲ್ ಪ್ಯಾರಡೈಸ್ ಸಾಕ್ಷಿ ಎಂದು ಉಡುಪಿ ಆದಮಾರು ಮಠದ ಶ್ರೀ ಶ್ರೀ ಈಶಪ್ರಿಯ ಸ್ವಾಮೀಜಿ ನುಡಿದರು.
ಸಾಸ್ತಾನ- ಪಾಂಡೇಶ್ವರದಲ್ಲಿ ನೂತನವಾಗಿ ಆರಂಭಗೊoಡ ಕೋಸ್ಟಲ್ ಪ್ಯಾರಡೈಸ್ ವಾಣಿಜ್ಯ ಸಂಕೀರ್ಣ ಸಂಸ್ಥೆಯನ್ನು ಉದ್ಘಾಟಿಸಿ ಆಶ್ರೀವಚನ ನೀಡಿ ಮಾತನಾಡಿ ಸಮಾಜದಲ್ಲಿ ಬದುಕಲು ಅವಕಾಶ ಕಲ್ಲಿಸುವುದರ ಜತೆಗೆ ಸಹಾಯಹಸ್ತ ನೀಡುವ ಮನಸ್ಥಿತಿ ಶ್ರೇಷ್ಢತೆಯನ್ನು ಪಡೆದುಕೊಳ್ಳುತ್ತದೆ, ವ್ಯಕ್ತಿ ಆರ್ಥಿಕ ಬಲಶಾಲಿಯಾಗುವುದರ ಜತೆಗೆ ಒಂದಿಷ್ಟು ಮನಸ್ಸುಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವ ಕಾರ್ಯ ಪ್ರಶಂಸನೀಯ ಜತಗೆ ಈ ಐವರು ಉದ್ಯಮಿಗಳು ಉದ್ಯಮರಂಗದಲ್ಲಿ ಯಶಸ್ಸಿ ದಾರಿ ಉತ್ತುಂಗಕ್ಕೆರಲಿ ಎಂದು ಹಾರೈಸಿದರು.
ಇದೇ ವೇಳೆ ಎ.ಜಿ ಅಸೋಸಿಯೇಟ್ಸ್ ಉಡುಪಿ ಇದರ ಸಿನಿಯರ್ ಸಿವಿಲ್ ಇಂಜಿನಿಯರ್ ಗೋಪಾಲ್ ಭಟ್, ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ,ಕೆಎಸ್ ಎಫ್ ಸಿ ಇದರ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆರ್ ಪ್ರಸಾದ್ ಇವರುಗಳನ್ನು ಸನ್ಮಾನಿಸಲಾಯಿತು.
ಗಣ್ಯರ ಸಮ್ಮುಖದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆದ ಸಂಸ್ಥೆ ಇದಾಗಿದ್ದು, ಬೋರ್ಡಿಂಗ್, ಲಾಡ್ಡಿಂಗ್, ಕಾನ್ಸರೆನ್ಸ್ ಹಾಲ್, ಮದುವೆ ಹಾಲ್, ಡಿಲಕ್ಸ್ ರೂಮ್ಸ್ ಮತ್ತು ಸೂಟ್ಸ್ ಕೋಸ್ಟಲ್ ಸಸ್ಯಾಹಾರಿ ಉಪಾಹಾರಗೃಹ ಮುಂತಾದ ಸೌಲಭ್ಯಗಳನ್ನು ಸಂಕೀರ್ಣವನ್ನು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಅಧ್ಯಕ್ಷತೆಯನ್ನು ದುರ್ಗಾ ಸನ್ನಿಧಿ ಸಭಾಂಗಣದ ಮಾಲಿಕ ಶೇಡಿಕೋಡ್ಲು ಎಚ್ ವಿಠ್ಠಲ್ ಶೆಟ್ಟಿ ವಹಿಸಿದ್ದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಸಾಸ್ತಾನ ಸಂತ ಅಂಥೋನಿ ಚರ್ಚ್ ಧರ್ಮಗುರು ರ ಫಾ| ಸುನೀಲ್ ಡಿ’ ಸಿಲ್ವಾ, ಗೀತಾನಂದ ಫೌಂಡೇಶನ್ ಆನಂದ ಸಿ.ಕುಂದರ್, ಪಾಂಡೇಶ್ವರ ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಪೂಜಾರ್ತಿ, ಕೆ.ಎಸ್.ಎಫ್.ಸಿ. ಮ್ಯಾನೇಜರ್ ಆರ್. ಪ್ರಸಾದ್, ಸಿವಿಲ್ ಎಂಜಿನಿಯರ್ ಗೋಪಾಲ ಭಟ್,ರೋಟರಿ ಜಿಲ್ಲಾ ಗವರ್ನರ್ ಸಿ.ಎ ದೇವ್ ಆನಂದ್, ಮತ್ತು ಸಂಸ್ಥೆಯ ಆಡಳಿತ ಪಾಲುದಾರರಾದ ವೀಣಾಬಿ.ಎಂ. ಭಟ್, ಉಷಾ, ಮಹೇಶ್ ಶೆಟ್ಟಿ ಕಮಲಾಕ್ಷಿ ಪ್ರಕಾಶ್ ಉಡುಪ, ಸುಪ್ರೀತಾ ಸತೀಶ್ ಶೆಟ್ಟಿ ಸುಜಾತಾ , ಅಲ್ವಿನ್ ಅಂದ್ರಾದೆ ಉಪಸ್ಥಿತರಿದ್ದರು.ಪಾಲುದಾರ ಮಹೇಶ್ ಶೆಟ್ಟಿ ಸ್ವಾಗತಿಸಿದರು. ಪಾಲುದಾರ ಬಿ.ಎಂ. ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಅಶೋಕ್ ಮಾಸ್ಟರ್ ನಿರೂಪಿಸಿದರು. ಪಾಲುದಾರ ಅಲ್ವಿನ್ ಅಂದ್ರಾದೆ ವಂದಿಸಿದರು.
ಪಾಂಡೇಶ್ವರದಲ್ಲಿ ನೂತನವಾಗಿ ಆರಂಭಗೊoಡ ಕೋಸ್ಟಲ್ ಪ್ಯಾರಡೈಸ್ ವಾಣಿಜ್ಯ ಸಂಕೀರ್ಣ ಸಂಸ್ಥೆಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಎ.ಜಿ ಅಸೋಸಿಯೇಟ್ಸ್ ಉಡುಪಿ ಇದರ ಸಿನಿಯರ್ ಸಿವಿಲ್ ಇಂಜಿನಿಯರ್ ಗೋಪಾಲ್ ಭಟ್,ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರಿ,ಕೆಎಸ್ ಎಫ್ ಸಿ ಇದರ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆರ್ ಪ್ರಸಾದ್ ಇವರುಗಳನ್ನು ಸನ್ಮಾನಿಸಲಾಯಿತು.
ಕೋಟ.ಫೆ.23 ಕೋಸ್ಟಲ್ ಪ್ಯಾರೆಡೈಸ್














Leave a Reply