
ಶಿವಮೊಗ್ಗ ಜಿಲ್ಲೆ ಸೊರಬ ಪೇಟೆ ಪೊಲೀಸ್ ಠಾಣಾ ಸರಹದ್ದು ಹೊಸಪೇಟೆ ಹಕ್ಲು (ಆನವಟ್ಟಿ ಹೋಗುವ ರಸ್ತೆ) ಬಳಿ ಇಸ್ಪೀಟ್ ಕ್ಲಬ್ ಜೂಜು ಅಡ್ದೆ – ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೃಪಾಕಟಾಕ್ಷವಿದೆ ಎಂದೂ ಡಂಗುರ ಸಾರುತ್ತಿರುವ ಕ್ಲಬ್ ಮ್ಯಾನೇಜ್ಮೆಂಟ್ – ಕೂಡಲೇ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಮಿಥುನ್ ಕುಮಾರ್ ರವರು ಸೊರಬದಲ್ಲಿ ನೆಡೆಯುತ್ತಿರುವ ಕ್ಲಬ್ ಗೆ ಬ್ರೇಕ್ ಹಾಕುವಂತೆ ಜೂಜಾಡಲು ತೆರಳುತ್ತಿರುವ ನೊಂದ ಕುಟುಂಬಸ್ಥರ ಮಹಿಳೆಯರ ಅರಣ್ಯರೋಧನೆ.
ಸೊರಬ :- ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದ ಸೊರಬ ನಗರ ವ್ಯಾಪ್ತಿಯ ಹೊಸಪೇಟೆ ಹಕ್ಲು (ಸೊರಬ ದಿಂದ ಆನವಟ್ಟಿ ರಸ್ತೆಯ ವೃತ್ತದಲ್ಲಿ ) ಹಾಡುಹಗಲೇ ನಿರ್ಭಯವಾಗಿ ಇಸ್ಪೀಟ್ ಕ್ಲಬ್ ನೆಡೆಯುತ್ತಿದ್ದೂ, ಪ್ರತಿದಿನ ನೂರಾರು ಕುಟುಂಬಗಳು ಬೀದಿಪಾಲಗುತ್ತಿದ್ದರೂ ಕ್ಲಬ್ ಅಡ್ದೆಯಿಂದ ಅನತಿ ದೂರದಲ್ಲೇ ಇರುವ ಸೊರಬ ನಗರ ಪೊಲೀಸ್ ಠಾಣೆಯಿದ್ದರೂ ಇಸ್ಪೀಟ್ ಕ್ಲಬ್ ಬ್ರೇಕ್ ಹಾಕದಿರುವುದು, ನೂರಾರು ಕುಟುಂಬಗಳು ಬೀದಿಪಾಲು ಆಗಲು ಪೊಲೀಸ್ ಇಲಾಖೆ ನೇರ ಕಾರಣರಾಗಿರುತ್ತಾರೆ ಎಂದೂ ಪೊಲೀಸ್ ಇಲಾಖೆಯ ವಿರುದ್ಧ ನೊಂದ ಸಂತ್ರಸ್ತರ ಕುಟುಂಬಸ್ಥ ಮಹಿಳೆಯರು ಹಿಡಿಶಾಪ ಹಾಕುತ್ತಿರುವುದು ಬೆಳಕಿಗೆ ಬಂದಿದೆ.
ಇಸ್ಪೀಟ್ ಕ್ಲಬ್ ಮ್ಯಾನೇಜ್ಮೆಂಟ್ ನೆಡೆಸುತ್ತಿರುವವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರ ಕೃಪಾಕಟಾಕ್ಷವಿದೆ ಎಂದೂ ಡಂಗುರ ಸಾರುತ್ತಿದ್ದೂ, ಶಿಕ್ಷಣ ಸಚಿವ ಮಧು ಬಂಗಾರಪ್ಪರವರ ಹೆಸರಿಗೆ ಮಸಿ ಬಳಿಯುವ ಯತ್ನ ನೆಡೆಯುತ್ತಿದೆ ಎಂದೂ ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.
ಸೊರಬ ನಗರದಲ್ಲಿ ನೆಡೆಯುತ್ತಿರುವ ಇಸ್ಪೀಟ್ ಕ್ಲಬ್ ದಿಂದ ನೂರಾರು ಕುಟುಂಬ ಬೀದಿಪಾಲು ಆಗುವುದನ್ನು ತಪ್ಪಿಸಿ ಕೂಡಲೇ ಸೊರಬ ನಗರದಲ್ಲಿ ನೆಡೆಯುತ್ತಿರುವ ಇಸ್ಪೀಟ್ ಕ್ಲಬ್ ಬ್ರೇಕ್ ಹಾಕುವಂತೆಯೂ, ಮ್ಯಾನೇಜ್ಮೆಂಟ್ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಮುಂದಾಗುವಂತೆ ನೊಂದ ಮಹಿಳೆಯರು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ರವರಲ್ಲಿ ಮನವಿ ಸಹಿತ ದೂರು ಸಲ್ಲಿಸುತ್ತಿದ್ದಾರೆ.
✍🏻 @ಓಂಕಾರ ಎಸ್. ವಿ. ತಾಳಗುಪ್ಪ*


















Leave a Reply