News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಡಾ.ಕೆ.ಶಿವರಾಮ ಕಾರಂತರು ಕಲಿತ
ಕೋಟ ಶಾಲೆಯಲ್ಲಿ ಕನ್ನಡ ಸಾಹಿತ್ಯ
ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಪ್ರೇರಣ ಕಾರ್ಯಕ್ರಮ

ಕೋಟ: ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಪ್ರೇರಣ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟಇಲ್ಲಿ ನಡೆಯಿತು. ಬ್ರಹ್ಮಾವರದ ಹಂದಾಡಿ ಪಂಚಾಯತ್ ಕಾರ್ಯದರ್ಶಿ ಪೂರ್ಣಿಮಾ ಅಧಿಕಾರಿ ಅವರು ಕನ್ನಡ ಸಾಹಿತ್ಯವನ್ನು ಬೆಳೆಸಿ ಪೋಷಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ತಾಯಂದಿರು, ರೈತಾಪಿ ವರ್ಗದ ಸಹಕಾರ ನಿರಂತರ ಪಡೆಯಬೇಕು ಎಂದು ತಿಳಿಸಿದರು.

ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಜಿ.ರಾಮಚಂದ್ರ
ಐತಾಳ್ ಅವರು ಪ್ರಾಥಮಿಕ ಹಂತದಲ್ಲಿ ರoಗ ಶಿಕ್ಷಣ ನೀಡಿದರೆ ಉತ್ತಮ ಪ್ರೇಕ್ಷಕರನ್ನು ರೂಪುಗೊಳಿಸಲು
ಸಾಧ್ಯ ಸಮಾಜದ ಅಂಕುಡೊoಕುಗಳನ್ನು ತಿದ್ದಲು ಸಾಧ್ಯ
ಎಂದು ತಿಳಿಸಿದರು. ಪರಿಷತ್‌ನ ಅಚ್ಚುತ ಪೂಜಾರಿ ಕಾರ್ಕಡ, ಹಾಗೂ ಮೀನ ಕಾರಂತ್ ಕನ್ನಡ ಪದ್ಯಗಳನ್ನು ಶ್ರಾವ್ಯವಾಗಿ ಹಾಡಿದರು.

ಮಾಜಿ ಸೈನಿಕ ಗಣೇಶ ಅಡಿಗ ಅವರು ಪ್ರಜೆಗಳು ದೇಶದ ನಂಟುತನವನ್ನು ಬೆಳೆಸಿಕೊಳ್ಳಬೇಕು ನಾಡು-ನುಡಿಯ ಬಗ್ಗೆ ಅಭಿಮಾನ ಇರಬೇಕು ಎಂದು ತಿಳಿಸಿದರು. ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ , ಸಾಹಿತ್ಯ ಪೋಷಕರಾದ ಬಾಲಕೃಷ್ಣ ಶೆಟ್ಟಿ ಹಾಗೂ ಉಪೇಂದ್ರ ಸೋಮಯಜಿ, ನರಸಿಂಹಮೂರ್ತಿ, ಶ್ರೀನಿವಾಸ ಉಪಾಧ್ಯ.ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೇರಣೆ ನೀಡಿದರು.

ಶಾಲಾ ವಿದ್ಯಾರ್ಥಿಗಳಿಂದ ಸ್ವಾಗತ ಮತ್ತು ಪ್ರಾರ್ಥನೆ ನಡೆಸಿ ಶಾಲಾ ಮುಖ್ಯೋಪಾಧ್ಯಾಯನಿ ಪುಷ್ಪಾವತಿ ಹೊಳ್ಳ ಧನ್ಯವಾದಗೈದರು. ಡಾ.ಕೆ.ಶಿವರಾಮ ಕಾರಂತರು ಕಲಿತ ಕೋಟ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಪ್ರೇರಣ ಕಾರ್ಯಕ್ರಮದಲ್ಲಿ
ಹಂದಾಡಿ ಪಂಚಾಯತ್ ಕಾರ್ಯದರ್ಶಿ ಪೂರ್ಣಿಮಾ ಅಧಿಕಾರಿ ಮಾತನಾಡಿದರು. ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ,ಸಾಹಿತ್ಯ ಪೋಷಕರಾದ ಬಾಲಕೃಷ್ಣ ಶೆಟ್ಟಿ ಹಾಗೂ ಉಪೇಂದ್ರ ಸೋಮಯಜಿ, ಬೆಳೆಸಿಕೊಳ್ಳಬೇಕು ನಾಡು-ನುಡಿಯ.ಬಗ್ಗೆ ಅಭಿಮಾನ ಇರಬೇಕು ಎಂದು ತಿಳಿಸಿದರು.

ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ,ಸಾಹಿತ್ಯ ಪೋಷಕರಾದ ಬಾಲಕೃಷ್ಣ ಶೆಟ್ಟಿ ಹಾಗೂ
ಉಪೇಂದ್ರ ಸೋಮಯಜಿ, ನರಸಿಂಹಮೂರ್ತಿ, ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ
ಪ್ರೇರಣೆ ನೀಡಿದರು. ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ
ನೀಲಾವರ ಸುರೇಂದ್ರ ಅಡಿಗ ,ಸಾಹಿತ್ಯ ಪೋಷಕರಾದ ಬಾಲಕೃಷ್ಣ ಶೆಟ್ಟಿ ಹಾಗೂ ಉಪೇಂದ್ರ ಸೋಮಯಜಿ, ನರಸಿಂಹಮೂರ್ತಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *