
ಕೋಟ: ಇಲ್ಲಿನ ಗಿಳಿಯಾರು ಹರ್ತಟ್ಟುವಿನ ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ದ್ವಿತೀಯ ವರ್ಷದ ವರ್ಧಂತಿ ಉತ್ಸವ ಕಾರ್ಯಕ್ರಮ ಮಂಗಳವಾರ ಸಂಪನ್ನಗೊoಡಿತು.
ಶ್ರೀ ದೇಗುಲದ ಪ್ರಧಾನ ಅರ್ಚಕ ಸುಧೀರ್ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳಾದ ದ್ವಿತೀಯ ವರ್ಧಂತಿ ಉತ್ಸವದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ನವಕ ಪ್ರಧಾನ ದ್ರವ್ಯ ಕಲಶ ಸ್ನಪನಾಧಿವಾಸ ಹೋಮ, ಶ್ರೀಷ್ಟೋಪಮಂತ್ರ, ಕಲಶಾಭಿಷೇಕ, ಮಹಾಪೂಜೆ ಕಾರ್ಯಕ್ರಮಗಳು ಜರಗಿದವು.
ಅಪರಾಹ್ನ ಮಹಾಸಾರ್ವಜನಿಕ ಅನ್ನಸಂತರ್ಪಣೆ , ಕೋಟದ ಪಂಚವರ್ಣ ಮಹಿಳಾ ಭಜನಾ ತಂಡ ಮತ್ತು ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇವರಿಂದ ಭಜನಾ ಕಾರ್ಯಕ್ರಮಗಳು ,ರಾತ್ರಿ ಮಹಾರಂಗಪೂಜೆ ಇತ್ಯಾಧಿ ಕಾರ್ಯಕ್ರಮಗಳು ನೆರವೆರಿತು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮತ್ತು ಅಂಬಿಕಾ ಎಸ್ ಗಾಣಿಗ ಧಾರ್ಮಿಕ ವಿಧಿವಿಧಾನದಲ್ಲಿ ಭಾಗಿಯಾದರು.
ದೇಗುಲದಲ್ಲಿ ಬೊಬ್ಬರ್ಯ ದೇವರ ದರ್ಶನ ಸೇವೆ,ನಾಗ ಸಾನಿಧ್ಯಕ್ಕೆ ವಿಶೇಷ ಪೂಜೆ ಸಂಪನ್ನಗೊAಡಿತು.ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿ ಹರೀಷ್ ದೇವಾಡಿಗ,ಪ್ರಮುಖರಾದ ಗೋಪಾಲಕೃಷ್ಣ ಮಯ್ಯ,ಚಂದ್ರಿಕಾ ಭಟ್, ಸಿದ್ಧ ದೇವಾಡಿಗ, ಶೇಖರ್ ದೇವಾಡಿಗ,ತಿಮ್ಮ ಕಾಂಚನ್,ಶೇವಧಿ ನಾಗರಾಜ್ ಗಾಣಿಗ,ಸಂತೋಷ್ ಪೂಜಾರಿ,ರಾಜು ಪೂಜಾರಿ ಹೋಬಳಿಮನೆ,ಗಿರೀಶ್ ದೇವಾಡಿಗ,ಬಾಬು ಶೆಟ್ಟಿ,ಚಂದ್ರ ಹಾಡಿಕೆರೆ,ಶಾಂತಾ ಪ್ರಕಾಶ್,ಸಂತೋಷ್ ದೇವಾಡಿಗ, ಕೀರ್ತೀಶ್ ಪೂಜಾರಿ,ಪ್ರದೀಪ್ ದೇವಾಡಿಗ,ಆದರ್ಶ ಶೆಟ್ಟಿ ಮತ್ತಿತರರು ಇದ್ದರು.
26ಕ್ಕೆ ಮಹಾಶಿವರಾತ್ರಿ ಶ್ರೀ ದೇಗುಲದಲ್ಲಿ ಮಹಾಶಿವರಾತ್ರಿ ಆಚರಣೆಯ ಅಂಗವಾಗಿ ಸಾರ್ವಜನಿಕ ರುದ್ರಾಭಿಷೇಕ ಸಂಜೆ 8.00ಕ್ಕೆ ಅಗಲು ರಂಗಪೂಜೆ,ಸಾAಸ್ಕçöÈತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.00 ರಿಂದ 8.00ರವರೆಗೆ ಕಲ್ಲಟ್ಟು ಮಹಿಳಾ ಭಜನಾ ಮಂಡಳಿ, ಹಾಗೂ ಶ್ರೀ ಭಗವತ್ ಭಜನಾ ಮಂಡಳಿ. ಕೋಟ ಪಡುಕರೆ ಇವರಿಂದ ಭಜನೆ ಸಂಜೆ ಗಂಟೆ 8.30ಕ್ಕೆ ಛಾಯಾ ತರಂಗಿಣಿ ಸಂಗೀತ ಶಾಲೆ ಹರ್ತಟ್ಟು, ಗಿಜಯಾರು ಇವರಿಂದ ನಾಟ್ಯ-ಗಾನ-ಲಹರಿ ಹಾಗೂ ಸ್ಥಳೀಯ ಪ್ರದಾಣೆಗಳಿಂದ ಸಾಂಸ್ಕöÈತಿಕ ಕಾರ್ಯಕ್ರಮ ರಾತ್ರಿ 9.00ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನಾಟಕ ಇವು ಸಮ ಆತಿಲ್ಲ ಪ್ರದರ್ಶನ,ರಾತ್ರಿ 9.30ಕ್ಕೆ ಮೂನ್ ವಾಕರ್ಸ್ ಡ್ಯಾನ್ಸ್ ಕ್ರೀವ್ ಕೋಟ-ಕದ್ರಿಕಟ್ಟು ಇವರಿಂದ ನೃತ್ಯ ವೈವಿಧ್ಯ ನೃತ್ಯ ಸಂಭ್ರಮ ಜರಗಲಿದೆ.
ಗಿಳಿಯಾರು ಹರ್ತಟ್ಟುವಿನ ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ದ್ವಿತೀಯ ವರ್ಷದ ವರ್ಧಂತಿ ಉತ್ಸವ ಕಾರ್ಯಕ್ರಮದಲ್ಲಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮತ್ತು ಅಂಬಿಕಾ ಎಸ್ ಗಾಣಿಗ ಧಾರ್ಮಿಕ ವಿಧಿವಿಧಾನದಲ್ಲಿ ಭಾಗಿಯಾದರು. ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿ ಹರೀಷ್ ದೇವಾಡಿಗ,ಪ್ರಮುಖರಾದ ಗೋಪಾಲಕೃಷ್ಣ ಮಯ್ಯ, ಪ್ರಧಾನ ಅರ್ಚಕ ಸುಧೀರ್ ಐತಾಳ್ ಮತ್ತಿತರರು ಇದ್ದರು.

Leave a Reply