
ಕೋಟ: ಮಹಾ ಶಿವರಾತ್ರಿಯ ಪ್ರಯುಕ್ತ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಸಾಸ್ತಾನ ಇಲ್ಲಿ ಶಿವಕೃಪಾ ಯುವಕ ಮಂಡಲ ಸಾಸ್ತಾನ.ನೇತೃತ್ವದಲ್ಲಿ ಶಿವನಾದ ಶಿರ್ಷಿಕೆಯಡಿ
ಸಾಂಸ್ಕ್ರತಿಕ ಕಲರವ ಕಾರ್ಯಕ್ರಮ ಜರಗಲಿದ್ದು ಈ ಅಂಗವಾಗಿ ಶಿವನಾದ ವೇದಿಕೆಯಲ್ಲಿ ಫೆ.27ರಂದು ಸಂಜೆ 5.00 ಶ್ರೀ ಪಂಜುರ್ಲಿ ಭಜನಾ ತಂಡ, ಗುಂಡ್ಮಿ ,ಸoಜೆ
5.30 ರಿoದ ಶ್ರೀ ಗೋಳಿಗರಡಿ ಮಹಿಳಾ ಭಜನಾ
ತಂಡ, ಸಾಸ್ತಾನ,ಸಂಜೆ 6.30 ರಿಂದ ರಾತ್ರಿ 8.ತನಕ ವಿವಿಧ ಸ್ಥಳೀಯ ಅಂಗನವಾಡಿ ಶಾಲೆಗಳಾದ ಪಾಂಡೇಶ್ವರ, ಶಾಲೆ
ಮಠತೋಟ, ಶಾಲೆ ಗೆಂಡಿಕೆರೆ, ಶಾಲೆ ಧೂಳಂಗಡಿ, ಚಿಪ್ಪಿಕಟ್ಟಿ, ಗುಂಡ್ಮಿ ಮತ್ತು ಸ್ಥಳೀಯರಿಂದ ವೈವಿಧ್ಯಮಯ
ಕಾರ್ಯಕ್ರಮ,ರಾತ್ರಿ ಗಂಟೆ 8:30ಕ್ಕೆ ಕಾರ್ತಿಕ್‌ರಾಜ್ ನೇತೃತ್ವದಲ್ಲಿ ಸಂಗೀತ ರಸಮoಜರಿ,ರಾತ್ರಿ ಗಂಟೆ 8.ರಿಂದ ಸಭಾ ಕಾರ್ಯಕ್ರಮ ಪ್ರಯುಕ್ತ ಮೆಸ್ಕಾಂ ವಿಭಾಗದ ಮಹೇಶ್, ಸಾಧಕ ಕೃಷಿಕ ಸದಾಶಿವ ಪೂಜಾರಿ, ಸಹಕಾರಿ
ಕ್ಷೇತ್ರದ ಸಾಧಕಿ ಶಾಂತಾ ಭಟ್ ಇವರುಗಳಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ ಜರಗಲಿದ್ದು, ರಾತ್ರಿ 9ರಿಂದ ಕುoದಾಪುರದ ಪ್ರಸಿದ್ಧ ನಾಟಕ ತಂಡ
ಮುತ್ತು ಕಲಾವಿದರಿಂದ ಇನ್ಸ್ ಪೆಕ್ಟರ್ ಅಣ್ಣಪ್ಪ ಪ್ರದರ್ಶನ ನಡೆಯಲಿದೆ ಎಂದು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಕೆ.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Reply