
ಕೋಟ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಪಿ.ಎಮ್.ಕಿಸಾನ್ ಸಮ್ಮಾನ್
ನಿಧಿ 19ನೇ ಕಂತು ಬಿಡುಗಡೆ ಸಮಾರಂಭ ಮತ್ತು ರೈತರಿಗೆ ಸನ್ಮಾನ ಕಾರ್ಯಕ್ರಮದ ಅಂಗವಾಗಿ ವಿವಿಧ ಕೃಷಿ
ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಮೌಲ್ಯವರ್ಧನೆ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಪ್ರಗತಿಪರ ಕೃಷಿಕರಾಗಿ ಸಾಧನೆಯನ್ನು ಗುರುತಿಸಿ ಭಾ.ಕೃ.ಅ. ಪ. ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದಿoದ ನೀಡುವ ಸಮಗ್ರ ಮತ್ಸ್ಯ ಕೃಷಿ ಪ್ರಶಸ್ತಿಯನ್ನು ಸುದಿನ
ಕೋಡಿ ಸೋಮವಾರ ಪಡೆದುಕೊಂಡರು.
ಫೆ.24 ರಂದು ನಡೆದ ಸಮಾರಂಭದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದರಾದ.ಕೋಟ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲಿ ಈ ಗೌರವ ನೀಡಲಾಯಿತು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ
ಡಾ.ಧನಂಜಯ್ , ಪೂಜಾ ನಾಯಕ್ ,ಕೃಷಿ.ವಿಜ್ಞಾನ ಕೇಂದ್ರ ಬ್ರಹ್ಮಾವರ ಇದರ ಮುಖ್ಯಸ್ಥೆ ಪೂರ್ಣಿಮಾ.ಜಿ.ಸಿ., ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ನಾಯ್ಕ್ ಉಪ ನಿರ್ದೇಶಕ ಡಾ.ಸದಾನಂದ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.
ರೈತರಿಗೆ ಸನ್ಮಾನ ಕಾರ್ಯಕ್ರಮದ ಅಂಗವಾಗಿ ವಿವಿಧ ಕೃಷಿ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಸುದಿನ ಕೋಡಿ ಇವರಿಗೆ ಸಮಗ್ರ ಮತ್ಸ್ಯ ಕೃಷಿ ಪ್ರಶಸ್ತಿ ಭಾಜನರಾದರು. ಉಡುಪಿ
ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ
ಡಾ.ಧನಂಜಯ್ , ಪೂಜಾ ನಾಯಕ್ ಮತ್ತಿತರರು ಇದ್ದರು.
Leave a Reply