
ಕೋಟ: ಇಲ್ಲಿನ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿ ಮಹಾಶಿವರಾತ್ರಿ ಅಂಗವಾಗಿ ಆರು ಸಾವಿರ ಅಧಿಕ ಮಂದಿ ಭಕ್ತರು ಆಗಮಿಸಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಅರ್ಚಕರಾದ ವೇ.ಮೂ ಸುಬ್ರಹ್ಮಣ್ಯ ಅಡಿಗ ಸೇವಾರ್ಥವಾಗಿ ರುದ್ರಹೋಮ ನೆರವೆರಿಸಿಕೊಂಡರು.
ವಿವಿಧ ಭಜನ ತಂಡಗಳಿoದ ಭಜನಾ ಕಾರ್ಯಕ್ರಮ,ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದದಿAದ ಫಲಹಾರದ ರೂಪದಲ್ಲಿ ಪ್ರಸಾದ ವಿತರಣೆ ನಡೆಯಿತು.ರಾತ್ರಿ ಕಿರಿ ಅಗಲು ರಂಗಪೂಜೆ, ಅಮೃತೇಶ್ವರಿ ಯಕ್ಷಗಾನ ಮಂಡಳಿಯ ವತಿಯಿಂದ ಯಕ್ಷಗಾನ ಬಯಲಾಟ ನಡೆಯಿತು.
ಮಹಾಶಿವರಾತ್ರಿ ಅಂಗವಾಗಿ ಸುಮಾರು ಆರು ಸಾವಿರ ಜನ ಭಕ್ತಾಧಿಗಳು ಪೂಜಾ ಕಾರ್ಯದಲ್ಲಿ ಭಾಗಿಯಾಗಿದರು.
ದೇಗುಲದ ಪ್ರದಾನ ಅರ್ಚಕರಾದ ಸದಾಶಿವ ಅಡಿಗ, ರಾಜೇಂದ್ರ ಅಡಿಗ, ತೀರ್ಥೇಶ್ ಭಟ್, ವರದರಾಜ ಭಟ್, ಅನಂತಮೂರ್ತಿ ಭಟ್, ಶಿವಮೂರ್ತಿ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೆರಿಸಿದರು. ಶ್ರೀ ಹಿರೇ ಮಹಾಲಿಂಗೇಶ್ವರ ಮಿತ್ರ ವೃಂದ ಕಾರ್ಯದರ್ಶಿ ಜಿ.ಎಸ್ ಆನಂದ್ ದೇವಾಡಿಗ, ಪ್ರಮುಖರಾದ ಅಜಿತ್ ದೇವಾಡಿಗ , ದಿನೇಶ್ ದೇವಾಡಿಗ, ರಾಜೇಶ್ ದೇವಾಡಿಗ, ವಿನೋದ ದೇವಾಡಿಗ, ರಕ್ಷತ್ ಆಚಾರ್, ಅವಿನಾಶ್ ಆಚಾರ್, ಚಂದ್ರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿ ಮಹಾಶಿವರಾತ್ರಿ ಅಂಗವಾಗಿ ಆರು ಸಾವಿರ ಅಧಿಕ ಮಂದಿ ಭಕ್ತರು ಆಗಮಿಸಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
Leave a Reply