
ಕೋಟ: ಕಳೆದ 52 ವರ್ಷಗಳಿಂದ ಯಕ್ಷಗಾನ ತರಬೇತಿಯನ್ನು ನಡೆಸುತ್ತಾ ಬಂದ, ಯಕ್ಷಗಾನ ಪ್ರಪಂಚಕ್ಕೆ 3000 ಕ್ಕೂ ಮಿಕ್ಕಿ ಕಲಾವಿದರನ್ನು ನೀಡಿರುವ, ಯಕ್ಷಗಾನ ಚಿಂತಕ, ರಾಷೃಪ್ರಶಸ್ತಿ ಪುರಸ್ಕೃತ ಮುಖ್ಯೋಪಾದ್ಯಾಯ ದಿವಂಗತ ಐರೋಡಿ ಸದಾನಂದ ಹೆಬ್ಬಾರರಿಂದ ಸ್ಥಾಪಿಸಲ್ಪಟ್ಟ, ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರು ಪ್ರಾಚಾರ್ಯರಾಗಿದ್ದ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇವರು ಶಾಲಾ ಬಾಲಕರಿಗಾಗಿ ಗುರುಕುಲ ಪದ್ದತಿಯಂತೆ ವಸತಿ ಶಾಲೆಯನ್ನು ಕಳೆದ ಹತ್ತು ವರ್ಷಗಳಿಂದ ನಡೆಸುತ್ತಿದೇವೆ.
ಶಿಕ್ಷಣದೊಂದಿಗೆ ಯಕ್ಷಗಾನ ಎಂಬ ಧ್ಯೇಯದೊಂದಿಗೆ ಪ್ರಾರಂಭವಾಗಿರುವ ಈ ವಸತಿ ಶಾಲೆಯಲ್ಲಿ ಆರನೆಯ ತರಗತಿಯಿಂದ ಹತ್ತನೆಯ ತರಗತಿಯ ತನಕದ ಬಾಲಕರಿಗೆ ಪ್ರವೇಶ ನೀಡಲಾಗುವುದು. ಅವಕಾಶ ಪಡೆದ ಬಾಲಕರಿಗೆ ಹತ್ತಿರದ ಶಾಲೆಯಲ್ಲಿ ಶಿಕ್ಷಣ ನೀಡಲಾಗುವುದಲ್ಲದೇ ಉಚಿತ ಊಟ, ಉಪಹಾರ, ವಸತಿಯ ವ್ಯವಸ್ಥೆಯೊಂದಿಗೆ ಯಕ್ಷಗಾನದ ಭಾಗವತಿಗೆ, ಮದ್ದಲೆ. ಚಂಡೆ. ನೃತ್ಯ ಶಿಕ್ಷಣವನ್ನೂ ನೀಡಲಾಗುವುದು. ಗುರುಕುಲ ಪದ್ದತಿಯಂತೆ ನಡೆಸಲುದ್ದೇಶಿಸುವ ಈ ಶಾಲೆಗೆ ಸೇರಬಯಸುವವರು 2025ರ ಮಾರ್ಚ ತಿಂಗಳ 30 ರ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದ್ದು, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಅಂಚೆ: ಐರೋಡಿ 576226, ಉಡುಪಿ ತಾಲೂಕು ಮತ್ತು ಜಿಲ್ಲೆ, ದೂರವಾಣಿ 9880605610 ಯನ್ನು ಸಂಪರ್ಕಿಸಲು ಕೇಳಿಕೊಳ್ಳಲಾಗಿದೆ ಎಂಬ ಪ್ರಕಟಣೆಯನ್ನು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ನೀಡಿರುತ್ತಾರೆ.
Leave a Reply