
ಕೋಟ: ಇಲ್ಲಿನ ಕೋಟದ ಮಣೂರು ಶ್ರೀ ಹೇರಂಬ ಮಹಾಗಣಪತಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಶತರುದ್ರಾಭಿಷೇಕ, ರಂಗಪೂಜೆ, ಅಗಲು ಸೇವೆ ಇತ್ಯಾಧಿ ಪೂಜಾ ಕಾರ್ಯಕ್ರಮಗಳು ದೇಗುಲದ ಪ್ರಧಾನ ಅರ್ಚಕ ರವಿ ಐತಾಳ್ ನೇತೃತ್ವದಲ್ಲಿ ಜರಗಿದವು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ದಂಪತಿಗಳು ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾದರು. ಉತ್ಸವದ ಅಂಗವಾಗಿ ಶ್ರೀರಾಮ ಮಹಿಳಾ ಭಜನಾ ತಂಡ, ಶ್ರೀ ಮಹಾಲಿಂಗೇಶ್ವರ ಭಜನಾ, ಚಿತ್ತಾರಿ ಭಜನಾ ತಂಡದಿoದ ಭಜನಾ ಕಾರ್ಯಕ್ರಮಗಳು ಜರಗಿತು.

ಇದೇ ವೇಳೆ ಶ್ರೀ ಮಹಾಲಿಂಗೇಶ್ವರ ಭಜನಾ ತಂಡದ ಪರವಾಗಿ ನಿವೃತ್ತ ಶಿಕ್ಷಕ ಎಂ.ಎನ್ ಮಧ್ಯಸ್ಥ,ಚಂದ್ರಿಕಾ ಭಟ್ ಇವರನ್ನು ಸನ್ಮಾನಿಸಲಾಯಿತು. ಭಕ್ತಾಧಿಗಳಿಗೆ ವಿವಿಧ ಬಗೆಯ ಪನಿವಾರದ ವ್ಯವಸ್ಥೆ ನೀಡಲಾಯಿತು.
ದೇಗುಲದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ರಾಧಕೃಷ್ಣ ಉರಾಳ್,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಆಚಾರ್,ಅಶೋಕ್ ಶೆಟ್ಟಿ, ಕೃಷ್ಣ ದೇವಾಡಿಗ, ಚಂದ್ರ ಹರ್ತಟ್ಟು, ದಿವ್ಯ ಪ್ರಭು, ಸುಫಲ ಶೆಟ್ಟಿ, ಅಚುತ್ ಹಂದೆ, ದೇಗುಲದ ಜೀರ್ಣೋದ್ಧಾರ ಸಮಿತಿ ಪ್ರಮುಖರಾದ ವಿಷ್ಣುಮೂರ್ತಿ ಮಯ್ಯ, ಅರುಣಾಚಲ ಮಯ್ಯ, ಶಿವರಾಮ ಶೆಟ್ಟಿ, ರವಿ ಮಯ್ಯ, ಜಯರಾಮ ಆಚಾರ್, ನಾಗರಾಜ್ ಅಮೀನ್, ಸಂತೋಷ್ ಸುವರ್ಣ, ನವೀನ್ ಶೆಟ್ಟಿ,ಚಂದ್ರ ಆಚಾರ್,bನಾಗಪಯ್ಯ ಪ್ರಭು, ಪುರುಷೋತ್ತಮ್ ಪೈ, ಮತ್ತಿತರರು ಇದ್ದರು
ಮಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಭಜನಾ ತಂಡದ ಪರವಾಗಿ ನಿವೃತ್ತ ಶಿಕ್ಷಕ ಎಂ.ಎನ್ ಮಧ್ಯಸ್ಥ ಇವನ್ನು ಸನ್ಮಾನಿಸಲಾಯಿತು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ದೇಗುಲದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ರಾಧಕೃಷ್ಣ ಉರಾಳ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಆಚಾರ್, ಅಶೋಕ್ ಶೆಟ್ಟಿ ಮತ್ತಿತರರು ಇದ್ದರು.
