
ಕೋಟ: ಶ್ರೀ ಬ್ರಹ್ಮ ನಂದಿಕೆಶ್ವರ ಹಾಗೂ ಸಪರಿವಾರ ದೇವಸ್ಥಾನ ಪಾಂಡೇಶ್ವರ ಇಲ್ಲಿ ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಶ್ರೀ ದೇವರಿಗೆ.ರುದ್ರಾಭಿಷೇಕ ಹಾಗೂ ಮಹಾ ಮಂಗಳಾರತಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೆರಿತು.
ಶ್ರೀ ಬಾಲಾಜಿ ಕಲಾ ಭಜನ ಮಂಡಳಿ ಇವರಿಂದ ಭಜನಾಮೃತ ಕಾರ್ಯಕ್ರಮ ಏರ್ಪಡಿಸಿದ್ದು ಈ ಬಾರಿ ಪುಟ್ಟರಾಜು ಶಿಷ್ಯ ವೃಂದ ಹಾವೇರಿ ಹಾಗೂ ಬಾಲಾಜಿ ಕಲಾ
ಭಜನಾ ಮಂಡಳಿ, ಮಹಿಳಾ ಹಾಗೂ ಮಕ್ಕಳ ಕುಣಿತ ಭಜನಾ ಕಾರ್ಯಕ್ರಮ ನೆಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಕ್ಕಳ ಕುಣಿತ ಭಜನಾ ತರಬೇತುದಾರ ಕೃಷ್ಣ ಬಂಗೇರ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ. ವಿ ರಮೇಶ್, ಶ್ರೀ ಬ್ರಹ್ಮ ನಂದಿಕೆಶ್ವರ ಹಾಗೂ ಸಪರಿವಾರ ದೇವಸ್ಥಾನ ಪ್ರಮುಖರಾದ ಸುಬ್ರಮಣ್ಯ ಭಟ್, ಶ್ರೀ ಕ್ಷೇತ್ರ ಕಳಿಬೈಲ್ ಪ್ರಧಾನ ಅರ್ಚಕ ಅಭಿಜಿತ್, ಗ್ರಾಮದ ಘನ್ಯರಾದ ಶೇಖರ್.ಮೂಡುಕಟ್ಟು, ಪಾಂಡೇಶ್ವರ ಪoಚಾಯತ್ ಸದಸ್ಯ ರವಿಶ್ ಶ್ರೀಯಾನ್ ,
ಬಾಲಾಜಿ ಕಲಾ ಭಜನಾ ಮಂಡಳಿಯ ಪ್ರಮುಖರಾದ ವಿಜಯ ಆಚಾರ್ಯ ಪಾಂಡೇಶ್ವರ , ಮಹಿಳಾ ತಂಡದ
ಅಧ್ಯಕ್ಷೆ ಮಮತಾ ಪಾಂಡೇಶ್ವರ,ಸದಸ್ಯೆ ಕಲ್ಯಾಣಿ ಉಪಸ್ಥಿತರಿದ್ದರು.
ಶ್ರೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಬ್ರಹ್ಮ ನಂದಿಕೆಶ್ವರ ಹಾಗೂ ಸಪರಿವಾರ ದೇವಸ್ಥಾನ ಪಾಂಡೇಶ್ವರ ಇಲ್ಲಿ ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಮಕ್ಕಳ ಕುಣಿತ ಭಜನಾ ತರಬೇತುದಾರ ಕೃಷ್ಣ ಬಂಗೇರ
ಅವರನ್ನು ಅಭಿನಂದಿಸಲಾಯಿತು. ಪಾoಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ. ವಿ ರಮೇಶ್, ಶ್ರೀ ಬ್ರಹ್ಮ
ನಂದಿಕೆಶ್ವರ ಹಾಗೂ ಸಪರಿವಾರ ದೇವಸ್ಥಾನ ಪ್ರಮುಖರಾದ ಸುಬ್ರಮಣ್ಯ ಭಟ್ ಮತ್ತಿತರರು ಇದ್ದರು.
Leave a Reply