News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನ-ಮಕ್ಕಳಿಗೆ ಧಾರ್ಮಿಕ ಚಿಂತನೆ ಪಸರಿಸಿ – ವಿಜಯ ಕೊಡವೂರು
ಸಾಸ್ತಾನದಲ್ಲಿ ಶಿವರಾತ್ರಿ ಶಿವನಾದ
ವೈಭವ, ಸಾಧಕರಿಗೆ ಪುರಸ್ಕಾರ

ಕೋಟ: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಕ್ಷೀಣಿಸುತ್ತಿದೆ ಇದಕ್ಕೆ ಕಾರಣ ಪೋಷಕರೆ ಇದರಿಂದ ಮನುಕುಲದಲ್ಲಿ ಭಯಭಕ್ತಿ
ಇನ್ನಿಲ್ಲವಾಗಿದೆ ಇದು ಮಾರಕವಾಗಿದೆ ನಮ್ಮ ಹಿರಿಯರು ಧಾರ್ಮಿಕತೆಯ ಮೂಲಕ ನಮ್ಮನ್ನು ಗಟ್ಟಿಗೊಳಿಸಿದ್ದಾರೆ ಅದೇ ರೀತಿ ಇಂದು ಪೋಷಕರು ಮಕ್ಕಳ ಧಾರ್ಮಿಕ ಚಿಂತನೆ ಪಸರಿಸಬೇಕು ಎಂದು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕ ವಿಜಯ ಕೊಡವೂರು
ಹೇಳಿದರು.

ಗುರುವಾರ ಸಾಸ್ತಾನದ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿ ಶಿವಕೃಪಾ ಯುವಕ ಮಂಡಲದ ಆಶ್ರಯದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಶಿವನಾದ ಕಾರ್ಯಕ್ರಮದಲ್ಲಿ ಮಾತನಾಡಿ ಶಿವ, ರಾಮ, ಕೃಷ್ಣ, ಲಕ್ಷ್ಮಣ, ಸೀತಾಮಾತೆಯ ಆದರ್ಶ ಇಂದಿನ ಯುವ ಸಮುದಾಯದಿಂದ ಮರೆಯಾಗಿದೆ, ಇದರಿoದ ಸಾಕಷ್ಟು
ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ ರಾಮರಾಜ್ಯದ ಕನಸು ನನಸಾಗಬೇಜಾದರೆ ಮಕ್ಕಳಲ್ಲಿ ಧಾರ್ಮಿಕತೆಯ ಬೀಜ ಬಿತ್ತಬೇಕು, ಮಠ ಮಂದಿರಗಳ ಬಗ್ಗೆ ಆಗಾಗ ಸಂದರ್ಶಿಸಬೇಕು ದೇವಕೀರ್ತನೆ ಸದಾ ಚಿರಸ್ಥಾಯಿಯಾಗಿಸಬೇಕು ಎಂದು ಕರೆ ನೀಡಿದರು.

ಪಾಂಡೇಶ್ವರದ ಯೋಗಗುರುಕುಲದ.ಮುಖ್ಯಸ್ಥ ಡಾ.ವಿದ್ವಾನ್ ವಿಜಯ ಮಂಜರ್ ಧಾರ್ಮಿಕ ಪ್ರವಚನಗೈದರು. ಕಾರ್ಯಕ್ರಮವನ್ನು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಕಾAತ್ ಹೊಂಬಾಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಹಕಾರಿ ಕ್ಷೇತ್ರದ ಸಾಧಕಿ ಶಾಂತಾ ಭಟ್,.ಮೆಸ್ಕಾಂ ವಿಭಾಗದ ಮಹೇಶ್,ಸಾಧಕ. ಕೃಷಿಕ ಸದಾಶಿವ ಪೂಜಾರಿ ಪಾಂಡೇಶ್ವರ, ಕ್ರೀಡಾ ಕ್ಷೇತ್ರದ ಹಿರಿಯ ಸಾಧಕ ವಿಠ್ಠಲ್ ಶೆಟ್ಟಿಗಾರ್ ಇವರುಗಳಿಗೆ ಶಿವಕೃಪಾ ಪುರಸ್ಕಾರ ನೀಡಿ
ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ ನಾಗೇಶ್ ಪೈ ಸಾಸ್ತಾನ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಬ್ರಹ್ಮಾವರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ, ಧಾರ್ಮಿಕ ಮಖಂಡ ಜಗದೀಶ್ ತುಂಗ, ನಾಗರಾಜ ತುಂಗ,ಭಾಸ್ಕರ ತುಂಗ, ಶಿವಕೃಪಾ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಕೆ.ವಿ ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ರಾಜ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಭಜನಾ ತಂಡಗಳಿoದ ಭಜನಾ ಕಾರ್ಯಕ್ರಮ, ಸ್ಥಳೀಯ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಕಾರ್ತಿಕ್ ರಾಜ್ ಪಾಂಡೇಶ್ವರ ಇವರಿಂದ ಸಂಗೀತ ರಸಮಂಜರಿ, ಕುoದಾಪುರ ಮೂರುಮುತ್ತು ಕಲಾವಿದರಿಂದ ನಾಟಕ
ಪ್ರದರ್ಶನಗೊಂಡಿತು. ಬ್ರಹ್ಮಲಿoಗೇಶ್ವರ ದೇವಸ್ಥಾನದ ಬಳಿ ಶಿವಕೃಪಾ ಯುವಕ ಮಂಡಲದ ಆಶ್ರಯದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಶಿವನಾದ ಕಾರ್ಯಕ್ರಮದಲ್ಲಿ ಸಹಕಾರಿ ಕ್ಷೇತ್ರದ ಸಾಧಕಿ
ಶಾಂತಾ ಭಟ್, ಮೆಸ್ಕಾಂ ವಿಭಾಗದ ಮಹೇಶ್, ಸಾಧಕ ಕೃಷಿಕ ಸದಾಶಿವ ಪೂಜಾರಿ ಪಾಂಡೇಶ್ವರ, ಕ್ರೀಡಾ ಕ್ಷೇತ್ರದ ಹಿರಿಯ ಸಾಧಕ ವಿಠ್ಠಲ್ ಶೆಟ್ಟಿಗಾರ್ ಇವರುಗಳಿಗೆ ಶಿವಕೃಪಾ ಪುರಸ್ಕಾರ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *