
ಕೋಟ: ಹವ್ಯಾಸಿ ಯಕ್ಷಗಾನ ಕಲಾವಿದ, ರಂಗನಟ, ರಂಗನಿರ್ದೇಶಕ, ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯ ಹಾವೇರಿ ಇಲ್ಲಿಯ ಕನ್ನಡ
ವಿಭಾಗದ ಸಹಾಯಕ ಪ್ರಾಧ್ಯಾಪಕ ಕೋಟ ಶಮಂತ ಕುಮಾರ ಕೆ.ಎಸ್ ಅವರು, ಉಡುಪಿಯ ರಾಷ್ಟçಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಸಲ್ಲಿಸಿದ
ಕನ್ನಡದಲ್ಲಿ ಠಾಕೂರ ನಾಟಕಗಳು ಬಿಡುಗಡೆಯ ಕಥನಗಳು ಸಂಶೋಧನ ಮಹಾಪ್ರಬಂಧಕ್ಕೆ ಹಂಪಿಯ
ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ
ನೀಡಿದೆ.
ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇದರ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮoಡಿಸಿರುವ ಇವರು ಮಂಗಳೂರು ವಿ.ವಿ.ಯಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದು, ಎನ್.ಇ.ಟಿ., ಕೆ.ಎಸ್.ಇಟಿ. ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿದ್ದಾರೆ. ಇವರು ಉಡುಪಿ ಜಿಲ್ಲೆಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕೋಟ ಶಿವರಾಮ ಕಾರಂತ ಹುಟ್ಟೂರು ಕೋಟತಟ್ಟು ಗ್ರಾಮದ ಶ್ರೀಧರ ಗಾಣಿಗ ಮತ್ತು ಭಾಗಿರಥಿ ದಂಪತಿಯ
ಪುತ್ರರಾಗಿರುತ್ತಾರೆ.
Leave a Reply