Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ನಾಟಕ ಬ್ಯಾಂಕ್ – ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಕರ್ನಾಟಕ ಬ್ಯಾಂಕ್ ತನ್ನ ಶತಮಾನೋತ್ಸವ ಸಂಭ್ರಮದ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನ ಬ್ರಾಹ್ಮಿ ಸಭಾಭವನದಲ್ಲಿ ಸಾರ್ವಜನಿಕ  ಬಳಕೆಗಾಗಿ ಉತ್ಕೃಷ್ಟ ಗುಣಮಟ್ಟದ ಶುದ್ಧೀಕರಣ ಸಾಮರ್ಥ್ಯವನ್ನು ಹೊಂದಿರುವ ಯು.ವಿ. ಫಿಲ್ಟರೇಷನ್ ತಂತ್ರಜ್ಞಾನದ ಪ್ರತಿಷ್ಠಿತ ಕಲ್ಕೂರ ರೆಫ್ರಿಜರೇಶನ್ ಮತ್ತು ಕಿಚನ್ ಇಕ್ವಿಪ್ಮೆಂಟ್ ನಿರ್ಮಿತ  ಶುದ್ದ ಬಿಸಿನೀರು, ಸಾಮಾನ್ಯ ಹಾಗೂ ತಣ್ಣೀರಿನ ಆಯ್ಕೆಗಳ ಮೂರು ನಳಿಕೆಗಳನ್ನು ಹೊಂದಿರುವ ಶುದ್ಧ ಕುಡಿಯುವ ನೀರಿನ ಎರಡು ಘಟಕಗಳನ್ನು ಕರ್ನಾಟಕ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ವಾದಿರಾಜ ಭಟ್ ರವರು ಯುವ ಬ್ರಾಹ್ಮಣಪರಿಷತ್ತಿನ ಅಧ್ಯಕ್ಷರಾದ ಚಂದ್ರಕಾಂತ ಕೆ. ಎನ್. ರವರಿಗೆ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.

ಈ ವಾಟರ್ ಕೂಲರ್ ಗಳ ವಾರ್ಷಿಕ ನಿರ್ವಹಣೆಯನ್ನು ಕಲ್ಕೂರ ರೆಪ್ರಿಜಿರೇಶನ್ ಸಂಸ್ಥೆ ನಿಶುಲ್ಕವಾಗಿ ನಿರ್ವಹಿಸುತ್ತದೆ ಎಂದು ಸಂಸ್ಥೆಯ ಮಾಲಕರಾದ ಶ್ರೀ ರಂಜನ್ ಕಲ್ಕೂರ ರವರು  ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಉಡುಪಿ ರಥಬೀದಿ ಶಾಖೆಯ ಸೀನಿಯರ್ ಮ್ಯಾನೇಜರ್ ಶ್ರೀ  ಪ್ರಶಾಂತ್ ರಾವ್ ಹಾಗೂ ಕುಂಜಿಬೆಟ್ಟು ಶಾಖೆಯ ಶ್ರೀಮತಿ ರಾಧಿಕಾ ಚಂದ್ರಕಾಂತ್, ಯುವ ಬ್ರಾಹ್ಮಣ ಪರಿಷತ್ತಿನ ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಪೂರ್ವಾಧ್ಯಕ್ಷರಾದ ರಂಜನ್ ಕಲ್ಕೂರ, ಉಪಾಧ್ಯಕ್ಷ ರಘುಪತಿ ರಾವ್, ಸಮಿತಿಯ ಸದಸ್ಯರಾದ ರಂಗನಾಥ್ ಸರಳಾಯ, ನಾರಾಯಣ ಭಟ್, ಕಲ್ಕೂರ ಬಿಲ್ಡರ್ಸ್ ಮತ್ತು ಡೆವಲಪರ್ಸ್ ನ ಪಾಲುದಾರ ರಾಹುಲ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು. ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಚೈತನ್ಯ ಎಂ. ಜಿ.  ಪ್ರಸ್ತಾವಿಸಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು.

Leave a Reply

Your email address will not be published. Required fields are marked *