ಕೋಟ : ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ವತಿಯಿಂದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಕೊಡಮಾಡುವ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಾಲ್ಕನೇ ವರ್ಷದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಡಾ|| ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ವೀಣಾ ಆರ್ ಭಟ್ ವರಂಗ ಹೆಬ್ರಿ, ಪದ್ಮಿನಿ ಪೈ ಬಿ ಕಾಸನಗುಂದು ಕೋಟ, ಸವಿತಾ ಮಾಧವ ಶಾಸ್ತಿç ಗುಂಡ್ಮಿ, ಶಾಂತಾ ವಾಸುದೇವ ಪೂಜಾರಿ ಮದ್ದುಗುಡ್ಡೆ, ಲಲಿತಾ ನಾಯಕ್ ಮದ್ದೂರು, ಅಶ್ವಿನಿ ಆರ್. ಕೊಂಚಾಡಿ ಮಂಗಳೂರು, ಮೂಕಾಂಬಿಕಾ ಮಯ್ಯ ಹರ್ತಟ್ಟು ಕೋಟ, ಗೀತಾ ಲಕ್ಷ್ಮೀಶ ಶೆಟ್ಟಿ ಮಂಗಳೂರು, ಪುಷ್ಪಾ ಪ್ರಸಾದ್ ಕಡಿಯಾಳಿ, ಸರಿತಾ ಕುತ್ಪಾಡಿ, ಶೋಭಾ ದಿನೇಶ್ ಉದ್ಯಾವರ, ಪ್ರಜ್ಞಾ ಜಿ. ಹಂದಟ್ಟು, ಬಿಂದು ನವೀನ್ ಕೋಟೇಶ್ವರ, ಶಾರದಾ ಅಂಪಾರು, ಶಯದೇವಿಸುತೆ ಮರವಂತೆ(ಜ್ಯೋತಿ ಜೀವನ್ ಸ್ವರೂಪ್) ಆಯ್ಕೆಯಾಗಿದ್ದು ಡಾ|| ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರವನ್ನು ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಮಾರ್ಚ್ 8 ರಂದು ಸಂಜೆ 4.30 ಗಂಟೆಗೆ ಪ್ರದಾನ ಮಾಡಲಾಗುವುದೆಂದು ಡಾ||ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಸತೀಶ ಕುಂದರ್, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ರಾವ್, ಪಂಚಾಯತ್ ಕಾರ್ಯದರ್ಶಿಯವರಾದ ಸುಮತಿ ಅಂಚನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ|| ಶಿವರಾಮ ಕಾರಂತ ಸಾಧಕ ಸ್ತಿçà ಪುರಸ್ಕಾರಕ್ಕೆ ಹಲವು ಮಹಿಳಾ ಸಾಧಕರ ನಡುವೆ ಯುವ ಪ್ರತಿಭೆ ಪ್ರಜ್ಞಾ ಜಿ. ಹಂದಟ್ಟು ಆಯ್ಕೆ ಪ್ರಜ್ಞಾ ಜಿ. ಹಂದಟ್ಟು ಇವರು ಚಿತ್ರ ,ನೃತ್ಯ ಕಲಾವಿದೆಯಾಗಿದ್ದು ತಾನು ಚಿತ್ರ ಬಿಡಿಸಿ ಸಂಪಾದಿಸಿದ ಹಣದಲ್ಲಿ ಅನಾರೋಗ್ಯ ಪೀಡಿತರಿಗೆ ನೆರವು ನೀಡಿದ್ದಾರೆ.
ಡಾ|| ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಹಲವು ಸಾಧಕ ಮಹಿಳೆಯರ ನಡುವೆ ಯುವ ಸಾಧಕಿ ಪ್ರಜ್ಞಾ ಹಂದಟ್ಟು ಆಯ್ಕೆ















Leave a Reply