
ಕೋಟ: ಹರ್ತಟ್ಟು ಫ್ರೆಂಡ್ಸ್ ಇವರ ವತಿಯಿಂದ ಹರ್ತಟ್ಟು ಪ್ರಿಮಿಯರ್ ಲೀಗ್ 2025 ಕ್ರಿಕೆಟ್ ಪಂದ್ಯಾಕೂಟ ಹರ್ತಟ್ಟು ಪರಿಸರದಲ್ಲಿ ಭಾನುವಾರ ನಡೆಯಿತು.
ಈ ಕಾರ್ಯಕ್ರಮವನ್ನು ಕೋಟದ ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ದೀಪ ಹಚ್ಚುವ ಮೂಲಕ ಉದ್ಘಾಟಿಸಿ ಕ್ರೀಡೆಯ ಮೂಲಕ ಉತ್ತಮ ಆರೋಗ್ಯ ಹಾಗೂ ಸಾಧನೆಗೈಯಲು ಸಾಧ್ಯ ,ಯುವ ಸಮುದಾಯ ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಿ ದೇಶದ ಕೀರ್ತಿಯನ್ನು ಹೆಚ್ಚಿಸಲಿ ಆ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತ್ತಾಗಲಿ ಎಂದು ಹಾರೈಸಿದರು.
ಹರ್ತಟ್ಟು ಭಾಗದ ಹಿರಿಯ ಕೃಷಿಕ ಬಾಬು ಶೆಟ್ಟಿ, ರೈತಧ್ವನಿ ಸಂಘದ ತಿಮ್ಮ ಕಾಂಚನ್ , ಸ್ಥಳೀಯರಾದ ದಿನೇಶ್ ಪೂಜಾರಿ ಹರ್ತಟ್ಟು, ಪಾರಿವಾಳ ಹಾರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪರಿಸರದ ಸಂತೋಷ್ ಪೂಜಾರಿ ಹಾಗೂ ಬಾಬಣ್ಣ ನಕ್ಷತ್ರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹರ್ತಟ್ಟು ಫ್ರೆಂಡ್ಸ್ ನ ಪ್ರಮುಖರಾದ ಆದರ್ಶ ಶೆಟ್ಟಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಹರ್ತಟ್ಟು ಫ್ರೆಂಡ್ಸ್ ಇವರ ವತಿಯಿಂದ ಹರ್ತಟ್ಟು ಪ್ರಿಮಿಯರ್ ಲೀಗ್ 2025 ಕ್ರಿಕೆಟ್ ಪಂದ್ಯಾಕೂಟ ಕೋಟದ ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಹರ್ತಟ್ಟು ಭಾಗದ ಹಿರಿಯ ಕೃಷಿಕ ಬಾಬು ಶೆಟ್ಟಿ, ರೈತಧ್ವನಿ ಸಂಘದ ತಿಮ್ಮ ಕಾಂಚನ್ , ಹರ್ತಟ್ಟು ಯುವ ಕೃಷಿಕ ದಿನೇಶ್ ಪೂಜಾರಿ ಹರ್ತಟ್ಟು ಮತ್ತಿತರರು ಇದ್ದರು.
Leave a Reply