
ಕೋಟ: ಅಧರ್ಮದ ದಾರಿ ಬಿಟ್ಟು ಧರ್ಮದ ತಳಹದಿಯನ್ನು ಗಟ್ಟಿಗೊಳಿಸಿ,ಸನಾತನ ಹಿಂದೂ ಜೀವನಾಚರಣೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಶ್ರೀಂಗೇರಿ ಜಗದ್ಗುರು ಶ್ರೀ ಶ್ರೀವಿಧುಶೇಖರಭಾರತೀ ಶ್ರೀಪಾದಂಗಳರು ಹಿಂದೂ ಸಮುದಾಯಕ್ಕೆ ಕಿವಿಮಾತು ಹೇಳಿದರು.
ಬುಧವಾರ ಸಾಲಿಗ್ರಾಮದ ಸಮೀಪ ಗುಂಡ್ಮಿ ವೈದಿಕ ಆಶ್ರಮದಲ್ಲಿ ಸಮಗ್ರ ರುದ್ರೆಕಾದಶಿನೀ ಹೋಮದ ಪೂರ್ಣಾಹುತಿಯ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಪ್ರವಚನದಲ್ಲಿ ನೀಡಿ ಮಾತನಾಡಿ ಪ್ರಸ್ತುತ ನಮ್ಮ ನಡೆ ನುಡಿಗಳು ಧರ್ಮಾಚರಣೆಗಳು ದಿಕ್ಕು ಬದಲಾಯಿಸುತ್ತಿದೆ ಇದರ ಭಾಗವಾಗಿ ಇತ್ತೀಚಿಗಿನ ವರ್ಷದಲ್ಲಿ ತಮ್ಮ ಮಕ್ಕಳ ಹೆಸರನ್ನಿಡುವ ಕಾರ್ಯದಲ್ಲಿ ವ್ಯತ್ಯಾಸಗಳನ್ನು ಕಾಣುತ್ತಿದ್ದೇವೆ ಸಾಮಾಜಿಕ ವ್ಯವಸ್ಥೆ ನೋಡಿ ನಿಮ್ಮ ಮಕ್ಕಳಿಗೆ ನಾಮಕರಣ ಮಾಡಬೇಡಿ ಹಿಂದಿನವರು ಉಳಿಸಿ ಬೆಳೆಸಿದ ನಾಮಧ್ಯೇಯ ಅರ್ಥಪೂರ್ಣತೆಯನ್ನು ನೀಡಿದೆ ಅದನ್ನು ಬಿಟ್ಟು ಅರ್ಥವಿಲ್ಲದ ಹೆಸರನಿಟ್ಟು ಸಂಸ್ಕಾರ ಭರಿತ ನಾಮವನ್ನು ಗಾಳಿಗೆ ತೂರುತ್ತಿದ್ದಾರೆ ಈ ರೀತಿಯ ಬೆಳವಣಿಗೆ ಸಲ್ಲ ಬದಲಾಗಿ ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಲು ಕರೆ ನೀಡಿದರಲ್ಲದೆ, ಪ್ರಸ್ತು ವೈದಿಕ ಮಂದಿರಗಳು ಹಿಂದೂ ಧರ್ಮದ.ಮೂಲಸ್ವರೂಪದಿಂದ. ಕೂಡಿದ್ದು ಇದರ ಆಚಾರ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಿ ಜಗತ್ತಿಗೆ ಸನಾತನ ಹಿಂದೂ ಧರ್ಮದ ಕೊಡುಗೆ ಅನನ್ಯವಾಗಿದೆ,ನಿಮ್ಮ ಮಕ್ಕಳನ್ನು ಸಂಸ್ಕಾರಭರಿತನ್ನಾಗಿಸಿ ಈ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿ ಎಂದು ಸಲಹೆ ನೀಡಿದರು.
ಧಾರ್ಮಿಕ ವಿಧಿವಿಧಾನ ಕಾರ್ಯದಲ್ಲಿ ವೈದಿಕ ಆಶ್ರಮದ ಮುಖ್ಯಸ್ಥ ಪಂಡಿತ್ ಸತ್ಯನಾರಾಯಣ ಉಪಾಧ್ಯಾಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಶಿಕ್ಷಕ ಶ್ರೀಧರ ಶಾಸ್ತಿç ಗುಂಡ್ಮಿ ನಿರ್ವಹಿಸಿದರು. ಶ್ರೀಗಳ ಭೇಟಿ ಹಿನ್ನಲ್ಲೆಯಲ್ಲಿ ಭಕ್ತ ಮಹಾಜನರಿಗೆ ಶ್ರೀಗಳು ಅನುಗ್ರಹ ಆರ್ಶೀವದಿಸಿ ಪ್ರಸಾದ ನೀಡಿದರು. ವಿಶೇಷವಾಗಿ ಭಕ್ತರಿಗೆ ಶ್ರೀ ಗುರುಗಳ ಪಾದಪೂಜೆ ಮತ್ತು ಭಿಕ್ಷಾವಂದನೆಗೆ ಅವಕಾಶ ಕಲ್ಪಿಸಲಾಯಿತು. ಹಾಗೂ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ಜರಗಿತು.
ಸಾಲಿಗ್ರಾಮದ ಸಮೀಪ ಗುಂಡ್ಮಿ ವೈದಿಕ ಆಶ್ರಮದಲ್ಲಿ ಸಮಗ್ರ ರುದ್ರೆಕಾದಶಿನೀ ಹೋಮದ ಪೂರ್ಣಾಹುತಿಯ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಪ್ರವಚನದಲ್ಲಿ ಶ್ರೀಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಶ್ರೀಪಾದಂಗಳ ನೀಡಿ ಮಾತನಾಡಿದರು. ವೈದಿಕ ಆಶ್ರಮದ ಮುಖ್ಯಸ್ಥ ಪಂಡಿತ್ ಸತ್ಯನಾರಾಯಣ ಉಪಾಧ್ಯಾಯ ಮತ್ತಿತರರು ಇದ್ದರು.
Leave a Reply