Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸತತ ಗೈರು ಹಾಜರಾದ ಮಕ್ಕಳ  ಬಗ್ಗೆ ನಿಗಾ ವಹಿಸಿ: ಶೇಖರಗೌಡ ರಾಮತ್ನಾಳ

ವರದಿ : ಅಶ್ವಿನಿ ಅಂಗಡಿ

ಬಾಗಲಕೋಟೆ: ಶಾಲೆಗೆ ಸತತ ಗೈರು ಹಾಜರಾದ ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಿ, ಗೈರುಹಾಜರಾತಿ ಕಾರಣಗಳನ್ನು ಪತ್ತೆ ಹಚ್ಚಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ಅವರು ಗುರುವಾರ ನವನಗರದ ಅಗಸ್ತ್ಯ ಕೋರ್ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಆರ್.ಟಿ.ಇ.ಕುರಿತು ಕರೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸತತ ಮೂರು ವರ್ಷಗಳ ಕಾಲ ಗೈರು ಹಾಜರಾದ ಮಗುವಿನ ಹಾಜರಾತಿ ಹಾಕಲಾಗಿದೆ. ಇಂತಹ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಸತತ ಏಳು, ಹದಿನೈದು ಗೈರು ಹಾಜರಾದರೆ ಹಾಜರಾತಿ ಅಧಿಕಾರಿಗಳು ನೋಟಿಸ್ ನೀಡಬೇಕು. ಮಗು ಪ್ರತಿ ದಿನ ಶಾಲೆಗೆ ಬರಬೇಕು. ಬರದೇ ಇರುವ ಮಕ್ಕಳ ಹಾಜರಾತಿ ಹಾಕಿದ್ದರೆ ಪತ್ತೆ ಹಚ್ಚಿ ಶಿಕ್ಷಕರಿಗೆ ನೋಟಿಸ್ ನೀಡಬೇಕು ಎಂದು ಸಲಹೆ ನೀಡಿದರು.

ಗ್ರಾ.ಪಂ.ಮಟ್ಟದಲ್ಲಿ ಮಕ್ಕಳ ಗ್ರಾಮಸಭೆ ನಡೆಸಬೇಕು. ಬಾಲ್ಯ ವಿವಾಹಗಳು ನಡೆಯದಂತೆ ಎಲ್ಲರೂ ನೋಡಿಕೊಳ್ಳಬೇಕು.‌ಬಾಲ್ಯ ವಿವಾಹ ನಡೆಯುವುದು ಕಂಡು ಬಂದರೆ ಕೂಡಲೇ 1098 ನಂಬರಿಗೆ ಫೋನ್ ಮಾಡಿ ಮಾಹಿತಿ ನೀಡಬೇಕು.‌ ಅನಧೀಕೃತ ಕೋಚಿಂಗ್ ಸೆಂಟರಗಳಲ್ಲಿ ಮಕ್ಕಳು ದಾಖಲಾಗಿದ್ದರೆ.‌ ಅಂತಹ ಮಕ್ಕಳ ಬಗ್ಗೆ ಪತ್ತೆ ಹಚ್ಚಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಸುದೀರ್ಘ ಮಾಹಿತಿ ನೀಡಿದರು.

ರಾಜ್ಯ ಮಕ್ಕಳ ರಕ್ಷಣಾ ನೀತಿ-2016 ಮತ್ತು ತಿದ್ದುಪಡಿ‌2023 ಅನುಷ್ಟಾನದ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ವಿವೇಕಾನಂದ ಮಾತನಾಡಿದರಯ. ವೇದಿಕೆಯ ಮೇಲೆ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಎಚ್.ಜಿ.ಮಿರ್ಜಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ಹಾಜರಿದ್ದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೇಶವ ಪೆಟ್ಲೂರ, ಎಂ.ಎಸ್.ಬಡದಾನಿ, ಆರ್. ಎಸ್.ಆದಾಪೂರ, ಜಾಸ್ಮೀನ್ ಕಿಲ್ಲೇದಾರ, ಅಶೋಕ ಬಸಣ್ಣವರ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಲಾಕಿನ ಕ್ಷೇತ್ರ ಸಮನ್ವಯಾಧಿಕಾರಿಗಳು, ದೈಹಿಕ ಶಿಕ್ಷಣ ಪರಿವೀಕ್ಷಕರು, ಶಿಕ್ಷಣ ಸಂಯೋಜಕರು, ಸಮೂಹ ಸಂಪನ್ಮೂಲ ವ್ಯಕ್ತಿಗಳು, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.

Leave a Reply

Your email address will not be published. Required fields are marked *