Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ  ಶಾಲಾ ಬಸ್ ಹಸ್ತಾಂತರ

ದಿನಾಂಕ: 04.03.2025 ರಂದು, ಕರ್ಣಾಟಕ ಬ್ಯಾಂಕ್, ತಮ್ಮ ಪ್ರಾದೇಶಿಕ ಕಚೇರಿ ಉಡುಪಿಯಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಯ ಅಡಿಯಲ್ಲಿ ಉಡುಪಿಯ ಕೈಪುಂಜಾಲ್, ಕಾಪು, ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ  ಶಾಲಾ ಬಸ್ ಅನ್ನು ಹಸ್ತಾಂತರಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಪಾಲ್ಗೊಂಡಿದ್ದು ಸಮಾಜದ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತ ಶತಮಾನ ಕಂಡ ಕರ್ಣಾಟಕ ಬ್ಯಾಂಕ್ ಪ್ರತಿ ವರ್ಷ ತಾನು ಬೆಳೆದದಲ್ಲದೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಮೂಲಕ  ಸಮಾಜದ ಬೆಳೆವಣಿಗೆಗೆ ಅತ್ಯಮೂಲ್ಯ ಕೊಡುಗೆಯನ್ನು ನೀಡುತ್ತಾ ಬಂದಿರುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕಿನ ಜಿ.ಎಂ ಶ್ರೀ.ವಿನಯ್ ಭಟ್ ಅವರು, ಶಾಲಾ ಸಮಿತಿಯ ಅಧ್ಯಕ್ಷರಾದ ಶ್ರೀ. ಸತೀಶ್ ಕುಮಾರ್,  ಶ್ರೀ. ಪಿ ರಾಮದಾಸ್ ಮಾದಮಣ್ಣಾಯ, ಮಾಲಕರು ಮೆಸರ್ಸ್ ಎಸ್ ಡಿಸೈನರ್ಸ್ ಲಿಮಿಟೆಡ್, ಬೆಂಗಳೂರು, ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾದ (ಎ.ಜಿ.ಎಂ) ಶ್ರೀ.ವಾದಿರಾಜ್ ಭಟ್ ಕೆ, ಡೆಪ್ಯುಟಿ ರೀಜನಲ್ ಹೆಡ್ ಶ್ರೀ.ಮನೋಜ್ ಕೋಟ್ಯಾನ್, ಚೀಫ್ ಮ್ಯಾನೇಜರ್ ಶ್ರೀ.ಪ್ರದೀಪ್ ಕುಮಾರ್, ಸ್ಥಳೀಯ ಶಾಖ ಪ್ರಭಂದಕರು  ಹಾಗೂ ಪ್ರಾದೇಶಿಕ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *