
ಕೋಟ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಡಿತಲೆ ಇಲ್ಲಿನ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಎಂ. ಶಂಕರ್ ಮಾಸ್ಟರ್ ರವರ ನಿವೃತ್ತಿಯ ಸಲುವಾಗಿ ನಡೆದ
ಬೀಳ್ಕೊಡುಗೆ ಸಮಾರಂಭದಲ್ಲಿ ಊರಿನವರಿoದ ಗೌರವಾರ್ಪಣೆ ಸಮಾರಂಭ.ಇತ್ತೀಚೆಗೆ ಕೋಡಿತಲೆ ಶಾಲೆಯ ವಠಾರದಲ್ಲಿ ನಡೆಯಿತು. ದಂಪತಿಗಳ ಸಮೇತವಾಗಿ ನಡೆದ ಈ ಭವ್ಯ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಅಧ್ಯಕ್ಷ ಕೆ.ಎಸ್. ಕಾರಂತ , ಸುಮಾರು 30 ವರ್ಷಗಳ ಹಿಂದೆ.ದ್ವೀಪವಾಗಿದ್ದ ಈ ಒಂದು ಕೋಡಿತಲೆ
ಭಾಗಕ್ಕೆ ಅಧ್ಯಾಪಕರು ದೋಣಿಯ ಸಹಾಯ ಪಡೆದು ಬಹಳ ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಅಭ್ಯಾಸ ಮಾಡಿಸುತ್ತಿದ್ದರು, ಈಗ ರಸ್ತೆಯ ವ್ಯವಸ್ಥೆ ಇದ್ದು ಶಾಲೆಯಲ್ಲಿ ಎಲ್ಲಾ ಸೌಕರ್ಯಗಳು ದೊರಕುತ್ತಿದ್ದು ಊರಿನ ನಾಗರಿಕರು ತಮ್ಮ ಮಕ್ಕಳಿಗೆ ಈ ಸರಕಾರಿ ಶಾಲೆಯಲ್ಲೆ ವಿದ್ಯಾಭ್ಯಾಸ ನೀಡಬೇಕೆಂದು ಮನವಿ ಮಾಡಿಕೊಂಡರು.
ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ಅಧ್ಯಕ್ಷತೆಯಲ್ಲಿ ನಡೆದ ಈ.ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಶಬನ ಅಜುಂ, ಬ್ರಹ್ಮಾವರ ವಲಯ ಶಿಕ್ಷಣ
ಸಂಯೋಜಕರಾದ ಪ್ರಕಾಶ್ ಬಿ.ಬಿ., ಪಂಚಾಯತ್ ಸದಸ್ಯ ಪ್ರಭಾಕರ್ ಮೆಂಡನ್,ಊರಿನ ಪಟೇಲರಾದ ರಾಮದಾಸ. ಖಾರ್ವಿ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮ ಖಾರ್ವಿ, ಹಿರಿಯರಾದ ನರಸಿಂಹ ಖಾರ್ವಿ ,ಭೋಜ ಖಾರ್ವಿ, ಮಂಜುನಾಥ ಖಾರ್ವಿ ಕೋಡಿತಲೆ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕಿ ನಾಗರತ್ನ, ನಿವೃತ್ತ ಶಿಕ್ಷಕ ಶಂಕರ್ ಉಪ್ಪೂರು, ಶಾಲೆಯ ಸಹಾಯಕಿ ಮೋಹಿನಿ ಖಾರ್ವಿ, ಶಾಲೆಯ ವಿದ್ಯಾರ್ಥಿಗಳು ಪಂಚಶಕ್ತಿ ,ವೀರಕೇಸರಿ ಮತ್ತು ಶ್ರೀ.ಯಕ್ಷೇಶ್ವರಿ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮ.ಸ್ವಾಗತಿಸಿ, ಸಹ ಶಿಕ್ಷಕಿ ಸುಪ್ರೀತಾ ವಂದಿಸಿದರು. ಕಾರ್ಯಕ್ರಮವನ್ನು ಮಹೇಶ್ ಗೋಳಿಬೆಟ್ಟು ನಿರೂಪಿಸಿದರು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಡಿತಲೆ ಇಲ್ಲಿನ ಮುಖ್ಯೋಪಾಧ್ಯಾಯರಾಗಿದ್ದ ಎಂ. ಶoಕರ್ ಮಾಸ್ಟರ್ ಗೌರವದ.ಬೀಳ್ಕೊಡುಗೆ ಜರಗಿತು. ಶ್ರೀ.ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಅಧ್ಯಕ್ಷ ಕೆ.ಎಸ್. ಕಾರಂತ, ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಶಬನ ಅಜುಂ ಮತ್ತಿತರರು ಇದ್ದರು.
Leave a Reply