Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ದೇಗುಲದಲ್ಲಿ ಲಕ್ಷಮೋದಕ ಗಣಯಾಗ ಪೂರ್ಣಾಹುತಿ

ಕೋಟ: ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿ ಮಾರ್ಚ್ 4ರಿಂದ ಆರಂಭಗೊoಡ ಲಕ್ಷಮೋದಕ ಗಣಯಾಗದ ಪೂರ್ಣಾಹುತಿಯು.ಶನಿವಾರರಂದು ಸಂಪನ್ನಗೊoಡಿತು.. ಲಕ್ಷಮೋದಕ ಗಣಯಾಗದೊಂದಿಗೆ ಸಂಜೆ 05ರಿoದ ಶ್ರೀಗುರುಧಾಮದಲ್ಲಿ ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೆಘ್ನ ಹೋಮ, ಸುದರ್ಶನ ಹೋಮ,ದಿಗ್ಬಲಿ ಕಾರ್ಯಕ್ರಮಗಳು ದೇಗುಲದ ತಂತ್ರಿಗಳಾದ ವೇ.ಮೂ ಕೃಷ್ಣ ಸೋಮಯಾಜಿ.ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೆರಿತು.

ಧಾರ್ಮಿಕ ಕೈಂಕರ್ಯದಲ್ಲಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ ದoಪತಿಗಳು ಭಾಗಿಯಾದರು. ದೇಗುಲದಲ್ಲಿ ವಿಶೇಷವಾಗಿ ಭಕ್ತರು ಗಣಯಾಗದಲ್ಲಿ ಭಾಗಿಯಾಗಿ ಅನ್ನ ಪ್ರಸಾದ
ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದೇಗುಲದ ಆಡಳಿತ.ಮಂಡಳಿಯ ಕಾರ್ಯದರ್ಶಿ ಪಿ.ಲಕ್ಷ್ಮೀ ನಾರಾಯಣ ತುಂಗ, ಉಪಾಧ್ಯಕ್ಷರಾದ ವೇ.ಮೂ. ಗಣೇಶಮೂರ್ತಿ ನಾವಡ,
ಕುಡಿನಲ್ಲಿ,ಕೋಶಧಿಕಾರಿ ವೇ.ಮೂ. ಪರಶುರಾಮ ಭಟ್ಟ, ಎಡಬೆಟ್ಟು,ಸದಸ್ಯರಾದ ಎ.ವಿ. ಶ್ರೀಧರ ಕಾರಂತ, ಬೆಂಗಳೂರು, ಕೆ. ಅನAತಪದ್ಮನಾಭ ಐತಾಳ, ಕೋಟ,
ವೇ.ಮೂ. ಜಿ. ಚಂದ್ರಶೇಖರ ಉಪಾಧ್ಯ, ಗುಂಡ್ಮಿ,ಪಿ. ಸದಾಶಿವ.ಐತಾಳ, ಕೃಷ್ಣಾಪುರ, ಮಂಗಳೂರು,ಆರ್. ಎಂ. ಶ್ರೀಧರ ರಾವ್ ಮೀಯಪದವು, ಕೇರಳ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ.ಸತೀಶ್ ಹಂದೆ, ಕೂಟ ಮಹಾಜಗತ್ತು ಅಂಗಸoಸ್ಥೆ ಅಧ್ಯಕ್ಷ ಪಿ.ಸಿ ಹೊಳ್ಳ, ಅಂಗಸoಸ್ಥೆಯ ಕಾರ್ಯದರ್ಶಿ ಮಹಾಬಲ ಹೇರ್ಳೆ,
ಮಾಜಿ ಅಧ್ಯಕ್ಷ ಶ್ರೀಪತಿ ಅಧಿಕಾರಿ,ಕೇಂದ್ರ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಕೆ.ತಾರಾನಾಥ ಹೊಳ್ಳ,ದೇಗುಲದ ಮಾಜಿ ಅಧ್ಯಕ್ಷ ಜಗದೀಶ ಕಾರಂತ, ಮಾಜಿ ಸದಸ್ಯ ಕೃಷ್ಣ ಹೆಬ್ಬಾರ್, ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋಧ ಹೊಳ್ಳ, ಹಾಗೂ ತಂತ್ರಿಗಳು, ಜೋಯಿಸರು, ಪವಿತ್ರಪಾಣಿ, ಅರ್ಚಕರು, ಉಪಾಧಿವಂತರು, ಗ್ರಾಮಮೋಕೇಸರರು ಉಪಸ್ಥಿತರಿದ್ದರು.

ಇಂದು ಲೋಕಾರ್ಪಣೆ ಮಾ.9ರ ಭಾನುವಾರ ಬೆಳಿಗ್ಗೆ ಶ್ರೀಗುರುನರಸಿಂಹ ದೇವರ ಸನ್ನಿಧಿಯಲ್ಲಿ ಸಹಸ್ರ ಸಂಖ್ಯಾ ನರಸಿಂಹ ಹೋಮ, ಪಂಚವಿAಶತಿ ಕಲಶಾಭಿಷೇಕ, ಮಹಾಪೂಜೆ ಸಂಜೆ 6 ರಿಂದ ಶ್ರೀ ಗುರುನರಸಿಂಹ ದೇವರಿಗೆ ಹಿರೇರಂಗಪೂಜೆ, ಉತ್ಸವಬಲಿ ಶ್ರೀ ಆಂಜನೇಯ ದೇವಳದವರೆಗೆ ರಜತರಥೋತ್ಸವವು ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತರು ತಿಳಿಸಿದ್ದಾರೆ. ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿ ಮಾರ್ಚ್ 4ರಿಂದ ಆರಂಭಗೊAಡ ಲಕ್ಷಮೋದಕ ಗಣಯಾಗದ ಪೂರ್ಣಾಹುತಿಯು ಶನಿವಾರರಂದು ಸಂಪನ್ನಗೊoಡಿತು.

Leave a Reply

Your email address will not be published. Required fields are marked *