Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರಾಷ್ಟ್ರೀಯ ಸೇವಾ ಯೋಜನಾ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಪಡುಕರೆ ಸೇವೆ ಎಲ್ಲಾ ಧರ್ಮಕ್ಕಿಂತ ಶ್ರೇಷ್ಠ ಆನಂದ ಸಿ. ಕುಂದರ್

ಕೋಟ: ನನಗಲ್ಲ, ನಿನಗೇ, ಎನ್ನುವ ದ್ಯೇಯ ವಾಕ್ಯದೊಂದಿಗೆ ಸೇವೆಯಲ್ಲಿ ನಿರತರಾಗಿರುವ ಸ್ವಯಂಸೇವಕರು ಎಲ್ಲಾ ಜಾತಿ ಮತ ಭೇದಗಳನ್ನು ಮರೆತು ಸಹಬಾಳ್ವೆ, ಸಹಜೀವನದಿಂದ ನಡೆಯುವ ಈ ಪರಿಕಲ್ಪನೆ ಬಹಳ ಅದ್ಬುತ. ಸಣ್ಣ ಸಂಘಟೆನೆಯಾಗಿ ಪ್ರಾರಂಭಗೊAಡ ರಾಷ್ಟಿçÃಯ ಸೇವಾ ಯೋಜನೆ ಇಂದು ಲಕ್ಷಾಂತರ ಯುವ ಜನತೆಯನ್ನು ತನ್ನ ತಕ್ಕೆಯಲ್ಲಿಸಿಕೊಂಡು  ಅವರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ವಹಿಸುತ್ತಿರುವ ಪಾತ್ರ ಅಪಾರ. ಆದುದರಿಂದ  ಶಿಬಿರಾರ್ಥಿಗಳು ತಮ್ಮನ್ನು ಈ ಶಿಬಿರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಶಿಬಿರ ಯಶಸ್ವಿಗೊಳಿಸುವುದರೊಂದಿಗೆ ತಮ್ಮ ವ್ಯಕ್ತಿತ್ವವನ್ನು ವಿಕಸಿತಗೊಳಿಸಿಕೊಳ್ಳಬೇಕು ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ತಿಳಿಸಿದರು. ಇತ್ತೀಚಿಗೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಟ ಪಡುಕರೆ ಇಲ್ಲಿನ ರಾಷ್ಟಿçÃಯ ಸೇವಾ ಯೋಜನಾ ಘಟಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ವಹಿಸಿ, ವಿದ್ಯಾರ್ಥಿಗಳು ಈ ಶಿಬಿರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇದರ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ ಇದರ ಅಧ್ಯಕ್ಷ ಧನಂಜಯ ಶೆಟ್ಟಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ  ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಾರ್ಯನಿರ್ವಾಹಣಾಧಿಕಾರಿ ಜಯಮ್ಮ ಪಿ,   ಹೆಗ್ಗುಂಜೆ ಗ್ರಾಮಪಂಚಾಯತ್ ಅಧ್ಯಕ್ಷ ರಾಮಕೃಷ್ಣ, , ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕ ಶ್ರೀಪತಿ ಅಡಿಗ  , ಮಂದಾರ್ತಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ,  ಲಕ್ಷಿö್ಮà ಸೋಮ ಬಂಗೇರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಇದರ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಸುರೇಶ ಪೂಜಾರಿ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಸುದಿನ, ರಾಷ್ಟಿçÃಯ ಸೇವಾ ಯೋಜನೆಯ ವಿದ್ಯಾರ್ಥಿ ನಾಯಕ ಸಾಗರ, , ಉಪಸ್ಥಿತರಿದ್ದರು.

ಶಿಬಿರದಲ್ಲಿ ಶಿಬಿರಾರ್ಥಿಗಳ ವ್ಯಕ್ತಿತ್ವ ವಿಕಸನದೊಂದಿಗೆ, ದೇವಸ್ಥಾನದ ಪರಿಸರ ಸ್ವಚ್ಚತೆ, ಪ್ಲಾಸ್ಟಿಕ್ ವಿರುದ್ಧ ಆದೋಂಲನ, ಸ್ವಚ್ಚ ಭಾರತ್ ಮಿಷ್‌ನ್ ಅಡಿಯಲ್ಲಿ ಅರಿವು ಕಾರ್ಯಕ್ರಮ ಮತ್ತು ಸ್ವಚ್ಚತಾ ಕಾರ್ಯಕ್ರಮದೊಂದಿಗೆ, ಸ್ಥಳೀಯ ಜನರ ಸಾಮಾಜಿಕ ಬದುಕನ್ನು ತಿಳಿಯುವ ಉದ್ದೇಶಗಳನ್ನು ಹೊಂದಲಾಗಿದೆ.
ಸ್ತುತಿ ಮತ್ತು ತಂಡದವರು ಪ್ರಾರ್ಥಿಸಿದರು, ಸಹಶಿಬಿರಾಧಿಕಾರಿ ಸಂತೋಷ ನಾಯ್ಕ ಹೆಚ್ ಸ್ವಾಗತಿಸಿದರು, ಕಾರ್ಯಕ್ರಮಾಧಿಕಾರಿ ಡಾ. ಪ್ರಕಾಶ ಕೆ ವಂದಿಸಿದರು, ತ್ರಿಷಾ ಮತ್ತು ಆಶ್ಲೇಷ ಕಾರ್ಯಕ್ರಮ ನಿರ್ವಹಿಸಿದರು.

ಇತ್ತೀಚಿಗೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಟ ಪಡುಕರೆ ಇಲ್ಲಿನ ರಾಷ್ಟಿçÃಯ ಸೇವಾ ಯೋಜನಾ ಘಟಕ ವಿಶೇಷ ಶಿಬಿರವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಉದ್ಘಾಟಿಸಿದರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ ಇದರ ಅಧ್ಯಕ್ಷ ಧನಂಜಯ ಶೆಟ್ಟಿ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಾರ್ಯನಿರ್ವಾಹಣಾಧಿಕಾರಿ ಜಯಮ್ಮ ಪಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *