ಕೋಟ : ಐರೋಡಿ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಸಾಧನೆ ಮಾಡಿರುವಂತಹ ವಿಶೇಷ ಚೇತನ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಇತ್ತೀಚಿಗೆ ಜರಗಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಇಂತಹ ಕಾರ್ಯಕ್ರಮ ಉಡುಪಿ ಜಿಲ್ಲೆಯಾದ್ಯಂತ ನಡೆದ ಮೊದಲಾ
ಕಾರ್ಯಕ್ರಮವಾಗಿದ್ದು ಗ್ರಾಮೀಣ ಭಾಗದಲ್ಲಿ ವೀಶೇಷ ಚೇತನರ ಸಾಧನೆಯು ಇತರರಿಗೆ ಮಾದರಿಯಾಗಬೇಕು ಹಾಗೂ ಅವರು ಸಹ ಉಳಿದ ಜನರಂತೆ ಸ್ವತಂತ್ರ ಜೀವವನ್ನು ನಡೆಸುವಂತೆ ಪ್ರೋತ್ಸಾಹ ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡ ವಿವಿಧ ಸಾಧನೆಗೈದ ಎಂಟು
ಮoದಿ ವಿಶೇಷ ಚೇತನರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಚೆಲುವರಾಜು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಕ್ಕು,ಉಪಾಧ್ಯಕ್ಷರಾದ
ಗೀತಾ ಶೆಟ್ಟಿ, ಗ್ರಾಮ ಪಂಚಾಯತ.ಸದಸ್ಯರು, ಪಂಚಾಯತ ಸಿಬ್ಬಂದಿ ವರ್ಗದವರು, ಗ್ರಾಮ ಸಹಾಯಕರು, ಪಂಚಾಯತ ಗ್ರಂಥ ಪಾಲಕಿ, ವಿಷೇಶ.ಚೇತನರ ಪಾಲಕ ಎ.ಎಸ್ ಗಣೇಶ್ ಇದ್ದರು.
ಕಾರ್ಯಕ್ರಮವನ್ನು ಕಾರ್ತಿಕ್ ಹಂಗಾರಕಟ್ಟೆ ನಿರೂಪಿಸಿ ವಂದಿಸಿದರು. ಐರೋಡಿ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಸಾಧನೆ ಮಾಡಿರುವಂತಹ ವಿಶೇಷ ಚೇತನ ಸಾಧಕರನ್ನು ಗುರುತಿಸಿ
ಸನ್ಮಾನಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಕ್ಕು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಗ್ರಾಮ ಆಡಳಿತ ಅಧಿಕಾರಿ ಚೆಲುವರಾಜು, ಉಪಾಧ್ಯಕ್ಷರಾದ ಗೀತಾ ಶೆಟ್ಟಿ, ಗ್ರಾಮ ಪಂಚಾಯತ ಸದಸ್ಯರು ಇದ್ದರು.
















Leave a Reply