Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಂಗಾರಕಟ್ಟೆ : ಪ್ರಯಾಣಿಕರಿಗೆ ಹಾಗೂ ವಾಹನಗಳಿಗೆ ಟೀಕೇಟ್ ನೀಡದೆ ಬಾರ್ಜೀನ ಸಿಬ್ಬಂದಿಗಳ‌ ವಂಚನೆ ಆರೋಪದ ಸ್ಥಳೀಯರು ಆಕ್ರೋಶ

ವರದಿ –  ಮೋಹನ್ ಬಂಗೇರ ಹಂಗಾರಕಟ್ಟೆ.

ಹಂಗಾರಕಟ್ಟೆ : ಬಾರ್ಜಿನಲ್ಲಿ ಸಂಚರಿಸುವ  ಪ್ರಯಾಣಿಕರಿಗೆ ಹಾಗೂ ವಾಹನಗಳಿಗೆ ಟಿಕೆಟ್ ಕೊಡದೆ ಅವ್ಯವಹಾರ ನಡೆದಿರುವ ಕುರಿತು ಹಾಗು ಬಾರ್ಜಿನ ದುರಸ್ಥಿಯ ಕುರಿತು ಪ್ರಶ್ನಿಸಿದಾಗ ಹಂಗಾರಕಟ್ಟೆ ಬಂದರಿನಲ್ಲಿ ಸ್ದಳೀಯರಿಗೆ ಹಾಗೂ ಬಾರ್ಜಿನ ಸಿಬ್ಬಂದಿಯ ನಡುವೆ ಮಾತುಕಥೆ ನಡೆದಿದೆ.

ಈ ಸಂದರ್ಭದಲ್ಲಿ ಬಾರ್ಜ್ ನಲ್ಲಿ ಮಾರ್ಜಿನ್ ಸಿಬ್ಬಂದಿ ಮೂರು ತಿಂಗಳಿನಿಂದ ಹಂಗಾರಕಟ್ಟೆಯಿಂದ ಕೋಡಿಬೆಂಗ್ರೆಗೆ ತೆರಳುವ ಪ್ರಯಾಣಿಕರಿಗೆ ಹಾಗು ವಾಹನಗಳಿಗೆ ಟೀಕೇಟ್ ಕೊಡದಿರುವುದು ಸ್ಥಳೀಯರ ಗಮನಕ್ಕೆ ತಿಳಿದು ಬಂದಿದ್ದು ಪ್ರಯಾಣಿಕನೋರ್ವ ಟಿಕೆಟ್ ಕೊಡದಿರುವ ಕುರಿತು ಪ್ರಶ್ನಿಸಿದಾಗ ಬಾರ್ಜಿನ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದು. ಬಾರ್ಜು ನಷ್ಟದಲ್ಲಿ ಸಂಚರಿಸುತ್ತಿದೆ. ಬೇಕಾದ್ದನ್ನು ಮುನ್ನಡೆಸಲು ನಮ್ಮಿಂಧ ಸಾಧ್ಯವಿಲ್ಲ. ನೀವು ನಮ್ಮ ಬಳಿ‌ ಮಾತಾಡಿ ಏನು ಪ್ರಯೋಜನವಿಲ್ಲ. ನೀವು ಮೇಲಾಧಿಕಾರಿಗಳ ಬಳಿ ನಿಮ್ಮ ಸಮಸ್ಯೆಯ ಕುರಿತು ಕೇಳಿ ಎಂದು ಕರೆ ಮಾಡಿ ಮಾತನಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಬಾರ್ಜಿಗೆ ಸಂಬಂದಿಸಿದ ಅಧಿಕಾರಿಯು ಉಡಾಫೆ ಉತ್ತರ ಕೊಟ್ಟಿರುತ್ತಾನೆ. “ಬಾರ್ಜಿನ ಮೇಲೆ ಪ್ರಯಾಣಿಸಲಾಗದಿದ್ದರೆ ಬಾರ್ಜಿನಲ್ಲಿ ಪ್ರಯಾಣೀಸಬೇಡಿ” ಎಂದರು‌ ನಂತರ ಇವರ ಉತ್ತರಕ್ಕೆ ಸ್ಥಳೀಯರು ಪ್ರತಿಭಟಿಸಿ ಸಿಡಿಮಿಡಿಗೊಂಡಿದ್ದಾರೆ.

ಪ್ರತಿಭಟನೆ ಸುದ್ದಿಯನ್ನು ತಿಳಿದ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಕುಂದರ್ ಹಾಗೂ ಕೋಡೀ ಬೆಂಗ್ರೆ ಗ್ರಾಮಪಂಚಾಯತ್ ಉಪಾಧ್ಯಕ್ಷರಾರ ಪ್ರಸಾದ್ ತಿಂಗಳಾಯರವರು ತಕ್ಷಣವೇ ಸ್ಥಳಕ್ಕೆ ದೌಡಯಿಸಿ ಪ್ರತಿಭಟನೆಯನ್ನು ಸರಿದೂಗಿಸಿ ಬುಧವಾರ ಬಂದರು ಒಳನಾಡು ಹಾಗು ‌ಜಲಸಾರಿಗೆ ಕಛೇರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ ಹಾಗೂ ಅಲ್ಲಿಯವರೆಗೆ ಪ್ರಯಾಣಿಕರಿಗೆ ಯಾವ ರೀತಿ ಸಮಸ್ಯೆ ಬರದಂತೆ ಯಥಾಸ್ಥಿತಿಯಲ್ಲಿ ಬಾರ್ಜಿನ ಸೇವೆಯನ್ನು  ನೀಡಬೇಕೆಂದು ಬಾರ್ಜಿನ ಸಿಬ್ಬಂದಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಹೋರಾಟದ ಪ್ರಮುಖರಾದ ದೀಕ್ಷಿತ್ ಡೀಸೋಜ., ಮೋಹನ್ ಬಂಗೇರ, ಆಶಿಕ್ ಪೂಜಾರಿ, ಸತೀಶ್, ಶಾಹಿದ್,  ಆನಂದ್  ಉಪಸ್ಥಿತರಿದ್ದರು.

ಬಾರ್ಜಿನ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ನ್ಯಾಯಯುತವಾಗಿ ವರ್ತಿಸಿ ಬಾರ್ಜಿನ ಮೇಲೆ ಸಾಗುವಂತಹ ವಾಹನಗಳಿಗೆ ಟಿಕೇಟ್ ಅನ್ನು ಕೊಟ್ಟು ಮತ್ತು ಬಾರ್ಜಿನ ದುರಸ್ದಿಯನ್ನು ಸರಿಪಡಿಸಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಸದ್ಯಕ್ಕೆ ಮುಂದೆ ಯಾವ ಸಮಸ್ಯೆಗಳು ತಲೆದೋರದಂತೆ ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ಸೇವೆ ದೊರಕುವಂತಾಗಬೇಕು.

Leave a Reply

Your email address will not be published. Required fields are marked *