ಬೈಂದೂರು : ಪ್ರತಿಷ್ಠಿತ ಬೈಂದೂರು ವ್ಯವಸಾಯ ಸೇವಾ ಸಹಕಾರಿ ನಿ ಯಡ್ತರೆ ಇದರ ಪ್ರಧಾನ ಕಛೇರಿ 03 ಕೋಟಿ ವೆಚ್ಚದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಸೋಮವಾರ ಯಡ್ತರೆಯಲ್ಲಿ ನಡೆಯಿತು.
ವೇ.ಮೂ ಕೇಂಜ ಶ್ರೀಧರ್ ತಂತ್ರಿ ಅವರ ನೇತೃತ್ವದಲ್ಲಿ ನೂತನ ಕಟ್ಟಡದ ಶಿಲಾನ್ಯಾಸ ಧಾರ್ಮಿಕ ಕಾರ್ಯ ನಡೆಸಿದರು. ಬೈಂದೂರು ವ್ಯವಸಾಯ ಸೇವಾ ಸಹಕಾರಿ ನಿ ಯಡ್ತರೆ ಅಧ್ಯಕ್ಷ ಕೆ ನಾರಾಯಣ ಹೆಗ್ಡೆ ಅವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಜಿ.ಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಬಾಬು ಹೆಗ್ಡೆ, ಬೈಂದೂರು ಬಿಜೆಪಿ ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ. ಸಂಘದ ನಿರ್ದೇಶಕರಾದ ಸದಾಶಿವ ಡಿ. ಪಡುವರಿ, ಚಿಕ್ಕು ಪೂಜಾರಿ ಶಿರೂರು, ಸಸಿಹಿತ್ಲು ವೆಂಕಟ ಪೂಜಾರಿ, ನಾಗರಾಜ್ ಶೆಟ್ಟಿ ನಾಕಟ್ಟೆ, ಎಮ್.ಎಚ್. ಗುರುದತ್ತ್ ಶೇರುಗಾರ್, ವಿಜಯಾ ಶೇರುಗಾರ್, ಶಂಕರ ನಾಯ್ಕ್, ಅರುಣ್ ಕುಮಾರ್ ಶಿರೂರು, ವಸಂತ ಕುಮಾರ್ ಶೆಟ್ಟಿ, ಹೆರಿಯ ದೇವಾಡಿಗ, ಜ್ಯೋತಿ ಪೂಜಾರಿ, ಸತೀಶ್ ಯಡ್ತರೆ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತಾಪಚಂದ್ರ ಶೆಟ್ಟಿ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಇದ್ದರು.

ಚಿತ್ರ ಕೃಪೆ : ದೊಟ್ಟಯ್ಯ ಪೂಜಾರಿ
ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು
















Leave a Reply