Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ -ಮಾದರಿ ಒಕ್ಕೂಟಗಳ ದೂರದೃಷ್ಟಿ ಹಾಗೂ ವ್ಯಾಪಾರ ಅಭಿವೃದ್ಧಿ ಯೋಜನೆ ತರಬೇತಿ
ಕಾರ್ಯಾಗಾರ
ಸಂಜೀವಿನಿ ಒಕ್ಕೂಟದ ಅಭಿವೃದ್ಧಿಗೆ ಪೂರಕ – ಸುರೇಶ್ ಬಂಗೇರ

ಕೋಟ: ಸಂಜೀವಿನಿ ಒಕ್ಕೂಟದ ಮೂಲದ ಗ್ರಾಮಪಂಚಾಯತ್ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಠಿಸಲಾಗುತ್ತಿದೆ ಎಂದು ಕೋಟ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಹೇಳಿದರು.

ಬುಧವಾರ ಕೋಟ ಗ್ರಾಮಪಂಚಾಯತ್ ಸಭಾoಗಣದಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ & ಜೀವನೋಪಾಯ ಇಲಾಖೆ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ,ಜಿಲ್ಲಾ ಪoಚಾಯತ್ ಉಡುಪಿ, ತಾಲೂಕು ಪಂಚಾಯತ್ ಬ್ರಹ್ಮಾವರ, ,ಪ್ರಕೃತಿ ಸಂಜೀವಿನಿ ಗ್ರಾಮಪoಚಾಯತ್ ಮಟ್ಟದ ಒಕ್ಕೂಟ ಕೋಟ .ಗ್ರಾಮಪಂಚಾಯತ್ ಇವರ ಆಶ್ರಯದಲ್ಲಿ ಮಾದರಿ ಒಕ್ಕೂಟಗಳ ದೂರದೃಷ್ಟಿ ಹಾಗೂ ವ್ಯಾಪಾರ ಅಭಿವೃದ್ಧಿ ಯೋಜನೆ ಕುರಿತು ನಾಲ್ಕು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ ಸಂಜೀವಿನಿ ಒಕ್ಕೂಟದ ಕಾರ್ಯಕ್ಷಮತೆ ಆಧಾರದ ಮೇಲೆ ಸ್ಥಳೀಯಾಡಳಿತಗಳು ಮತ್ತಷ್ಟು ವೇಗವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಸ್ವಾವಲಂಬಿ ಬದುಕಿಗೆ ಸರಕಾರದ ವಿವಿಧ ಯೋಜನೆಗಳನ್ನು
ಬಳಸಿಕೊಂಡು ಸಮಾಜದಲ್ಲಿ ಮುಂಚೂಣಿಯ
ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ.ಸರಕಾರ ಸಂಜೀವಿನಿ ಒಕ್ಕೂಟದ ಮೂಲಕ ಸ್ತ್ರೀ ಸಬಲಿಕರಣ, ಸಾಮರಸ್ಯಕ್ಕೆ ಮುನ್ನುಡಿ ಬರೆಯಲಿದೆ. ಅಲ್ಲದೆ ಒಕ್ಕೂಟದ ವಿವಿಧ ಕೋಶಗಳನ್ನು ಕೇಂದಿಕರಿಸಿ ಮಹತ್ತರ ಮೈಲ್ಲಿಗಲ್ಲು ಸ್ಥಾಪಿಸಿ ಮಾದರಿ ಒಕ್ಕೂಟವಾಗಿ ಹೊರಹೊಮ್ಮಿರುವುದು ಜಿಲ್ಲೆಗೆ ಹೆಗ್ಗಳಿಕೆಯಾಗಿದೆ ಎಂದು ತಮ್ಮ ಆಶಯವನ್ನು
ವ್ಯಕ್ತ ಪಡಿಸಿದರು.

ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ .ಶೆಟ್ಟಿ ಉದ್ಘಾಟಿಸಿದರು. ಪ್ರಕೃತಿ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟ ಕೋಟ ಇದರ ಅಧ್ಯಕ್ಷೆ ಮಾಲತಿ ಶೇಖರ್, ಬ್ರಹ್ಮಾವರ ವಲಯ ಕ್ಲಸ್ಟರ್ ಹೆಡ್ ಸ್ವಾತಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಆರಿಫ್ ಉನ್ನಿಸ್, ತಾಲೂಕು ಸಂಪನ್ಮೂಲ ವ್ಯಕ್ತಿ ಹೇಮಾ ಜಗನಾಥ್, ಸಂಜೀವಿನಿ ಒಕ್ಕೂಟದ ಪಿಆರ್‌ಐ ರೀತಾ ಸುಧೀಂದ್ರ ಉಪಸ್ಥಿತರಿದ್ದರು.

ಒಕ್ಕೂಟದ ಕೃಷಿ ಸಖಿ ಮಮತಾ ಸ್ವಾಗತಿಸಿದರು. ಎಂ.ಬಿ.ಕೆ ಪ್ರೇಮ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಎಲ್ ಸಿ ಆರ್ ಪಿ ಭಾರತಿ ವಂದಿಸಿದರು. ನಾಲ್ಕು ದಿನಗಳ ಕಾಲ ಹಮ್ಮಿಕೊಂಡ ಈ ಕಾರ್ಯಾಗಾರ ಸರಕಾರದ ವಿವಿಧ ಸೇವೆಗಳ ಬಗ್ಗೆ ವಿಸೃತ ಮಾಹಿತಿಯನ್ನು ಸಂಜೀವಿನಿ
ಒಕ್ಕೂಟದ ವಿವಿಧ ಘಟಕಗಳು ಪಡೆದುಕೊಳ್ಳಲಿದೆ. ಪ್ರಕೃತಿ ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ. ಒಕ್ಕೂಟ ಕೋಟ ಮಾದರಿ ಒಕ್ಕೂಟಗಳ ದೂರದೃಷ್ಟಿ ಹಾಗೂ ವ್ಯಾಪಾರ ಅಭಿವೃದ್ಧಿ ಯೋಜನೆ ತರಬೇತಿ ಕಾರ್ಯಾಗಾರವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ .ಶೆಟ್ಟಿ ಉದ್ಘಾಟಿಸಿದರು. ಪ್ರಕೃತಿ ಸಂಜೀವಿನಿ ಗ್ರಾಮಪoಚಾಯತ್ ಮಟ್ಟದ ಒಕ್ಕೂಟ ಕೋಟ ಇದರ ಸಂಜೀವಿನಿ ಅಧ್ಯಕ್ಷರು ಮಾಲತಿ ಶೇಖರ್, ಬ್ರಹ್ಮಾವರ ವಲಯ ಕ್ಲಸ್ಟರ್ ಹೆಡ್ ಸ್ವಾತಿ ಮತ್ತಿತರರು  ಇದ್ದರು.

Leave a Reply

Your email address will not be published. Required fields are marked *