ಕೋಟ: ಶ್ರೀ ಮಾರಿಯಮ್ಮ ದೇವಸ್ಥಾನ, ಚಿತ್ರಪಾಡಿ- ಸಾಲಿಗ್ರಾಮ ಇಲ್ಲಿ ದೇವಿಯ ಪ್ರತಿಷ್ಠಾ ವರ್ಧಂತ್ಯೋತ್ಸವವು ಮಂಗಳವಾರ ಮತ್ತು ಬುಧವಾರದಂದು ಸಂಪನ್ನಗೊoಡಿತು.
ಶ್ರೀ ದೇಗುಲದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಮಂಗಳವಾರ ದೇವತಾ ಪ್ರಾರ್ಥನೆ, ಪುಣ್ಯಾಹ, ಬ್ರಹ್ಮಕಲಶ ಸ್ಥಾಪನೆ, ಕಲಾಹೋಮ, ಕಲಶಾಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ ಬುಧವಾರ ಮಹಾಪೂಜೆ,ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಿದವು.
ಧಾರ್ಮಿಕ ವಿಧಿವಿಧಾನಗಳನ್ನು ದೇಗುಲದ ತಂತ್ರಿ ಕೃಷ್ಣ ಸೋಮಯಾಜಿ ನೇತ್ರತ್ವದಲ್ಲಿ ದೇಗುಲದ ಪ್ರದಾನ ಅರ್ಚಕ ಸುಧೀರ್ ಐತಾಳ್ ಸಮ್ಮುಖದಲ್ಲಿ ಜರಗಿದವು.
ದೇಗುಲದ ಅಧ್ಯಕ್ಷ ಆನಂದ್ ಗಾಣಿಗ ದಂಪತಿಗಳು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು. ಸಾಂಸ್ಕoತಿಕ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಶ್ರೀ ಮಾರಿಯಮ್ಮ ಮಹಿಳಾ ಭಜನಾ ಮಂಡಳಿ, ಚಿತ್ರಪಾಡಿ ಶ್ರೀ ನಂದಿಕೇಶ್ವರ ಭಜನಾ ಸಂಘ, ಶ್ರೀ ಮಾರಿಯಮ್ಮ ಮಹಿಳಾ ಭಜನಾ ಮಂಡಳಿ, ಚಿತ್ರಪಾಡಿ ಇವರಿಂದ ಕುಣಿತ ಭಜನೆ ನಡೆಯಿತು.
ರಾತ್ರಿ ಅಮೃತಾ ಉಪಾಧ್ಯಾ ಇವರ ಈಶಾಲಾಸ್ಯ ನೃತ್ಯ ತಂಡ ಚಿತ್ರಪಾಡಿ ಇವರಿಂದ ನೃತ್ಯ ಸಿಂಚನ, ಪಂಚದೀವಿಟಿಕೆ ದೃವಾಂಶ ಸಾರುವ ಕಥಾನಕ ತ್ರಿನೇತ್ರ ಕಲಾತಂಡ ಉಪ್ಪಾಡಿ ನಾಟಕ ಪ್ರದರ್ಶನ ಮಾ.12 ಬುಧವಾರ ವಿಪ್ರ ಮಹಿಳಾ ಸಾಲಿಗ್ರಾಮ ವಲಯ ಭಜನಾ ಕಾರ್ಯಕ್ರಮ ,ರಾತ್ರಿ ಶ್ರೀ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕೋಟ ಇವರಿಂದ ಯಕ್ಷಗಾನ ಬಯಲಾಟ ನಾಗನಂದನೆ ಪ್ರಸಂಗ ಜರಗಿತು.
ದೇಗುಲದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕಾರ್ಯದರ್ಶಿ ನಾಗೇಂದ್ರ ಆಚಾರ್, ಕೋಶಾಧಿಕಾರಿ ಉದಯ್ ಗಾಣಿಗ, ಸಮಿತಿಯ ಪದಾಧಿಕಾರಿಗಳು ಮತ್ತಿತರರು ಇದ್ದರು.
ಚಿತ್ರಪಾಡಿ ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯೋತ್ಸವ ಸಂಪನ್ನಗೊoಡಿತು. ದೇಗುಲದ ಅಧ್ಯಕ್ಷ ಆನಂದ್ ಗಾಣಿಗ ,ಗೌರವಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕಾರ್ಯದರ್ಶಿ ನಾಗೇಂದ್ರ ಆಚಾರ್, ಕೋಶಾಧಿಕಾರಿ ಉದಯ್ ಗಾಣಿಗ, ಸಮಿತಿಯ ಪದಾಧಿಕಾರಿಗಳು ಮತ್ತಿತರರು ಇದ್ದರು.

















Leave a Reply