ಕೋಟ: ಬಲಿರೇನಯ್ಯ ಇರುವಂತ ಸ್ಥಳ ಭೂಲೋಕ, ಇಲ್ಲಿ ಕಲಿಯುಗದಿ ಹಲವು ರೀತಿಯ ವ್ಯಾದಿಗಳಿಗಳು ಮನುಕುಲವನ್ನು ಸಂಕಷ್ಟಕ್ಕಿಡುಮಾಡುತ್ತಿದೆ ಇದನ್ನು ಹೋಗಲಾಡಿಸಬೇಕಾದರೆ ಆಗಾಗ ಸಮಯೋಚಿತ ಆಹಾರ ಸೇವನೆ,ಅನಾರೋಗ್ಯ ಸೃಷ್ಠಿಯಾದಗ ವೈದ್ಯರನ್ನು ಭೇಟಿಯಾಗಬೇಕು ಅವರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆಯಬೇಕು,ಪರಿಸರವನ್ನು ಸಂರಕ್ಷಿಸಿ ಕಾಪಾಡಬೇಕು ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲದಂತೆ ಜಾಗೃತಿ ವಹಿಸಬೇಕು,ಆರೋಗ್ಯಕ್ಕೆ ಹಾನಿಕರವಾದ ಪದಾರ್ಥಗಳನ್ನು ಸೇವಿಸಬಾರದು ಹೀಗೆಂದವರು ಯಕ್ಷಕಲಾವಿದರು…!!!
ಶುಕ್ರವಾರ ಕೋಟ ಗ್ರಾಮಪಂಚಾಯತ್ ವಠಾರದಲ್ಲಿ ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಜಿಲ್ಲಾ ಮಾಹಿತಿ, ಶಿಕ್ಷಣ, ಸಂವಹನ ವಿಭಾಗ ಉಡುಪಿ ತಾಲೂಕು ಆರೋಗ್ಯ ಅಧಿಕಾರಿ ಕಛೇರಿ ಕುಂದಾಪುರ ಇವರ ಸಹಯೋಗದಲ್ಲಿ ಜಾನಪದ ಕಲಾಪ್ರಕಾರದಡಿಯಲ್ಲಿ ಯಕ್ಷಗಾನದ ಮೂಲಕ ಆರೋಗ್ಯ ಜಾಗೃತಿ ಕಾರ್ಯಕ್ರಮ ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ ಎಂಬ ಶೀರ್ಷಿಕೆಯಡಿ ಕಿರು ಯಕ್ಷಕಾರ್ಯಕ್ರಮ ನೆರೆದಿದ್ದ ಜನರನ್ನು ಜಾಗೃತಗೊಳಿಸಿತು.
ತಮ್ಮ ಕಲಾ ಅಭಿನಯದ ಮೂಲಕ ಸುಮಾರು ಅರ್ಧ ತಾಸುಗಳಿಗೂ ಅಧಿಕ ಸಮಯವನ್ನು ಜನ ಜಾಗೃತಿಗೊಳಿಸಿದರು. ಈ ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ ಚಾಲನೆ ನೀಡಿದರು.ಕೋಟ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ವಿಶ್ವನಾಥ ಪ್ರಾಸ್ತಾವಿಕ ನುಡಿಗಳನ್ನಾಡಿ ಸರಕಾರದ ಯೋಜನೆ ಇಲಾಖಾ ಮಟ್ಟದಲ್ಲಿ ಕಲೆಯ ಮೂಲಕ ಜನರನ್ನು ಜಾಗೃತಗೊಳಿಸುವ ವಿನೂತನ ಮಾದರಿ ಕಾರ್ಯ ಇದಾಗಿದ್ದು ಜನರು ಆರೋಗ್ಯ,ಪರಿಸರ,ಇನ್ನಿತರ ವಿಚಾರಗಳಲ್ಲಿ ಜಾಗೃತ ಸಮಾಜ ಸೃಷ್ಠಿಸಲು ಕರೆ ನೀಡಿದರು.
ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಸದಸ್ಯ ಅಶೋಕ್ ಶೆಟ್ಟಿ, ಕೋಟ ಗ್ರಾಮ ಲೆಕ್ಕಿಗ ಚಲುವರಾಜು, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್, ಪಂಚಾಯತ್ ಸದಸ್ಯ ಚಂದ್ರ ಪೂಜಾರಿ, ಶಿವರಾಮ ಶೆಟ್ಟಿ, ಕೋಟ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಹರೀಶ್ಚಂದ್ರ,ಕೇoದ್ರದ ಸಿಸ್ಟರ್ ನಿರ್ಮಲ, ವಾರಿಜ ಮತ್ತಿತರರು ಇದ್ದರು. ಗ್ರಾಮಪಂಚಾಯತ್ ಕಾರ್ಯದರ್ಶಿ ಶೇಖರ ಮರವಂತೆ ಸ್ವಾಗತಿಸಿದರೆ,ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ನಿರೂಪಿಸಿದರು.
ಕೋಟ ಗ್ರಾಮಪಂಚಾಯತ್ ವಠಾರದಲ್ಲಿ ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಾನಪದ ಕಲಾಪ್ರಕಾರದಡಿಯಲ್ಲಿ ಯಕ್ಷಗಾನದ ಮೂಲಕ ಆರೋಗ್ಯ ಜಾಗೃತಿ ಕಾರ್ಯಕ್ರಮ ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ ಎಂಬ ಶೀರ್ಷಿಕೆಯಡಿ ಕಿರು ಯಕ್ಷಕಾರ್ಯಕ್ರಮ ನೆರೆದಿದ್ದ ಜನರನ್ನು ಜಾಗೃತಗೊಳಿಸಿತು.

















Leave a Reply