Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಾಗರಿಕರ ಆರೈಕೆ ಜನಪ್ರತಿನಿಧಿಯ ಜವಾಬ್ದಾರಿ –  ಕೊಡವೂರು

ಕೊಡವೂರು ವಾರ್ಡಿನಲ್ಲಿ ನರೇಂದ್ರ ಮೋದಿಯವರ ಚಿಂತನೆಯಂತೆ ಕೇಂದ್ರ ಸರಕಾರದ ಸರಕಾರದ ನಮ್ಮ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 09-03-2025 ರಂದು ನಡೆಯಿತು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ವಿಜಯ್ ಕೊಡವ್ಯೂರು ಮಾತನಾಡಿ, ನಾಗರಿಕರನ್ನು ಆರೋಗ್ಯದಿಂದ ಇರಲು ನೋಡಿಕೊಳ್ಳುವಂತ ಜವಾಬ್ದಾರಿ ಆ ಭಾಗದ ಜನಪ್ರತಿನಿಧಿಯ ದಾಗಿರುತ್ತದೆ. ಕೊಡವೂರು ವಾರ್ಡಿನಲ್ಲಿ ನರೇಂದ್ರ ಮೋದಿಯ ಯೋಚನೆಯ ಕೆಲಸವಾಗುತ್ತಿದ್ದು ಈ ಸಂದರ್ಭದಲ್ಲಿ ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯಡಿಯಲ್ಲಿ ಕೋಡವೂರಿನಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ ಆಗಿರುತ್ತದೆ.

ನರೇಂದ್ರ ಮೋದಿಯವರ ಯೋಚನೆಗಳನ್ನು ನಾವು ಕೊಡವೂರು ವಾರ್ಡಿನಲ್ಲಿ ಜಾರಿಗೊಳಿಸುವಂಥದ್ದು ಕಾರ್ಯಕರ್ತರ ಜೊತೆಯಲ್ಲಿ ನಡೆಯುತ್ತಿದೆ ಕೇವಲ ಮೋದಿಯ ಹೆಸರನ್ನು ಮಾತ್ರ ಹೇಳುವುದಲ್ಲ ಬದಲಾಗಿ ಮೋದಿ ನಡೆದಂತೆ ದಾರಿಯಲ್ಲಿ ನಡೆಯಬೇಕು ಎನ್ನುವ ಚಿಂತನೆ ನಮ್ಮದಾಗಬೇಕು.

ನಮ್ಮ ಕ್ಲಿನಿಕ್ ಉದ್ಘಾಟನೆಯ
ಸಂದರ್ಭದಲ್ಲಿ ಬ್ರಹತ್ ಆರೋಗ್ಯ ತಪಾಸಣೆ ಮೇಳ ಆಯೋಜಿಸಿದ್ದು ಈ ಶಿಬಿರದಲ್ಲಿ ಉಚಿತ ಕನ್ನಡಕ ವಿತರಣೆ, ರಕ್ತ ದಾನ ಶಿಬಿರ, ದಂತ ಚಿಕಿತ್ಸಾ ಶಿಬಿರ, ಇಸಿಜಿ, ಬಿಪಿ ಶುಗರ್ ಕ್ಯಾನ್ಸರ್  ಮುಂತಾದ ಆರೋಗ್ಯ ತಪಾಸಣೆ ನಡೆಯಿತು.

ಈ ಸಂದರ್ಭದಲ್ಲಿ ಮಾನ್ಯ ಶಾಸಕರಾಗಿರುವ ಯಶ್ ಪಾಲ್   ಸುವರ್ಣ, ನಗರಸಭೆ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ದಿನಕರ್ ಪೂಜಾರಿ ಹೇರೂರು, ಉಡುಪಿ ಜಿಲ್ಲಾ ಆಸ್ಪತ್ರೆ
ಸರ್ಜನ್ ಡಾ.ಅಶೋಕ್, ತಾಲೂಕು ಆರೋಗ್ಯಾಧಿಕಾರಿ ವಾಸುದೇವ್, ಸ್ಥಳೀಯ ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಪ್ರಮುಖರು,  ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *