ಎಸ್ . ಎಮ್. ಸ್ ಕಾಲೇಜು ಬ್ರಹ್ಮಾವರ ,ರಾಷ್ಟೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಇದರ ಉದ್ಘಾಟನಾ ಸಮಾರಂಭವು ದಿನಾಂಕ 10-02-2025 ರಂದು ವಿಶ್ವಜ್ಞಾನ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಂಡಾಡಿ ಇಲ್ಲಿನಡೆಯಿತು .
ಪ್ರಗತಿಪರ ಕೃಷಿಕರಾದ ಶೇಡಿಕೊಡ್ಲು ವಿಠ್ಠಲ್ ಶೆಟ್ಟಿ ಅವರು ಉದ್ಘಾಟಿಸಿ , ಶಿಬರಾರ್ಥಿಗಳಿಗೆ ಸೇವೆಯ ಮಹತ್ವದ ಬಗ್ಗೆ ತಿಳಿಸಿದರು .ಕಾಲೇಜಿನ ಸಂಚಾಲಕರಾದ ರೆವ್.ಫಾದರ್ ಎಮ್.ಸಿ .ಮಥಾಯ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ Prof .ಸಖಾರಾಮ್ ಸೋಮಯಾಜಿ ಅವರು ಶುಭಾಶಂಸನೆ ಮಾಡಿದರು.
ಕಾಲೇಜಿನ ಪ್ರಾಶುಪಾಲರಾದ Dr ರಾಬರ್ಟ್ ರೋಡ್ರಿಗೆಸ್ , ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ವಾಸುದೇವ ಶೆಟ್ಟಿ , ಮಂದಾರ್ತಿ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ,ಚಿನ್ಮಯ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಪ್ರಕಾಶ್ ಆಚಾರ್ಯ ,ವಿಶ್ವಜ್ಞಾನ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀ ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲರುಹಾಗೂ ಎನ್ .ಎಸ್. ಎಸ್.ಯೋಜನಾಧಿಕಾರಿ ಪ್ರಸನ್ನ ಶೆಟ್ಟಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಶಾಂಕ್ ಹಾಗು ಸ್ನೇಹ ಕಾರ್ಯಕ್ರಮ ನಿರ್ವಹಿಸಿದರು. ಯಜ್ನೇಶ್ ಸ್ವಾಗತಿಸಿದರು. ವಿದ್ಯಾ ವಂದಿಸಿದರು.

















Leave a Reply