ಕೋಟ: ಸಮಾಜದಲ್ಲಿ ನಾನಾ ರೀತಿಯ ಚಟುವಟಿಕೆಗಳನ್ನು ಕಾಣುತ್ತದೆ ಆದರೆ ಅದರಲ್ಲಿ ಅರ್ಥಪೂರ್ಣ ಸಂಘಟನೆ ಕಾರ್ಯವೈಕರಿ ಶಿವರಾಮ ಎಂಬ ಸಾಮಾಜಿಕ ಶಕ್ತಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದೆ ಎಂದು ಕೋಟದ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಸಂಜೀವ ಗುಂಡ್ಮಿ ಅಭಿಪ್ರಾಯಪಟ್ಟರು.
ಶನಿವಾರ ಸಾಲಿಗ್ರಾಮದ ಕಾರ್ಕಡ ಭೂಮಿಕಾ ಇಲ್ಲಿ ದಿ.ಕೆ ಶಿವರಾಮ ನೆಲ್ಲಿಬೆಟ್ಟು ಇವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಸಂಸ್ಮರಣೆಗೈದು ಮಾತನಾಡಿ ಒರ್ವ ಸಂಘಟನಾ ಚತುರನ ಅಗಲುವಿಕೆಯ ನಂತರವು ಅವರ ಹೆಸರು ಉಳಿಸುವ ಗೆಳೆಯರ ಬಳಗದ ಕಾರ್ಯ ಅತ್ಯಂತ ಪ್ರಶಂಸನೀಯ ಹಾಗೂ ಶಿವರಾಮ ಅವರ ಶಿಸ್ತುಬದ್ಧ ಜೀವನ ಆಸಕ್ತ ಕ್ಷೇತ್ರ ಇಂದಿನ ಯುವಕರಿಗೆ ಆದರ್ಶಪ್ರಾಯವಾಗಿದೆ ಎಂದು ಅವರು ನಡೆದುಬಂದ ದಾರಿಯನ್ನು ಮೆಲುಕು ಹಾಕಿದರು. ಇದೇ ವೇಳೆ ಶಿವರಾಮರ ಭಾವಚಿತ್ರಕ್ಕೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಸಹಿತ ಗಣ್ಯರು ಪುಷ್ಭನಮನ ಸಲ್ಲಿಸಿದರು.
ಅವರ ಸಂಸ್ಮರಣಾ ಅಂಗವಾಗಿ ಇರ್ವರು ಕಲಾ ಕ್ಷೇತ್ರದ ಸಾಧಕರಾದ ಯಕ್ಷ ಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಹಾಗೂ ಚಿತ್ರ ನಿರ್ದೇಶಕ ರಾಘವೇಂದ್ರ ಶಿರಿಯಾರ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ,ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್,ಕೋಟ ಸಿ ಎ ಬ್ಯಾಂಕ್ ನಿರ್ದೇಶಕರಾದ ಟಿ.ಮಂಜುನಾಥ್ ಗಿಳಿಯಾರು,ಜಿ.ತಿಮ್ಮ ಪೂಜಾರಿ, ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ,ಕಲಾಸಾಹಿತಿ ಎಚ್ ಜನಾರ್ದನ ಹಂದೆ ಮಂಗಳೂರು, ,ಕಾರ್ಕಡ ವಿಶ್ವೇಶ್ವರ ದೇಗುಲದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಅಚ್ಯುತ್ ಪೂಜಾರಿ ,ಶಿವರಾಮ ಇವರ ಸಹೋದರರಾದ ತಮ್ಮಯ್ಯ,ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು. ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಗಣೇಶ್ ನೆಲ್ಲಿಬೆಟ್ಟು ಸ್ವಾಗತಿಸಿದರು.
ಗೆಳೆಯರ ಬಳಗದ ಉಪಾಧ್ಯಕ್ಷ ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು.ಸಾಲಿಗ್ರಾಮ ಪಟ್ಟಣಪಂಚಾಯತ್ ತೆರಿಗೆ ವಸೂಲಿ ಸಿಬ್ಬಂದಿ ಕೆ.ಚಂದ್ರಶೇಖರ್ ಸೋಮಯಾಜಿ ವಂದಿಸಿದರು. ಕಾರ್ಯಕ್ರಮದ ನಂತರ ಚಂದ್ರಕಾAತ ನಾಯರಿ ಬಳಗದ ವತಿಯಿಂದ ಸಂಗೀತ ರಸಮಂಜರಿ,ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಸಾರಥ್ಯದ ಹವ್ಯಾಸಿ ಕಲಾವಿದರಿಂದ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.
ಸಾಲಿಗ್ರಾಮದ ಕಾರ್ಕಡ ಭೂಮಿಕಾ ಇಲ್ಲಿ ದಿ.ಕೆ ಶಿವರಾಮ ನೆಲ್ಲಿಬೆಟ್ಟು ಇವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಕಲಾ ಕ್ಷೇತ್ರದ ಸಾಧಕರಾದ ಯಕ್ಷ ಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಹಾಗೂ ಚಿತ್ರ ನಿರ್ದೇಶಕ ರಾಘವೇಂದ್ರ ಶಿರಿಯಾರ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ,ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್,ಕೋಟ ಸಿ ಎ ಬ್ಯಾಂಕ್ ನಿರ್ದೇಶಕರಾದ ಟಿ.ಮಂಜುನಾಥ್ ಗಿಳಿಯಾರು,ಜಿ.ತಿಮ್ಮ ಪೂಜಾರಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಇದ್ದರು.
















Leave a Reply