ಕೋಟ: ರೋಟರಿಯಂತ ಅಂತಾರಾಷ್ಟ್ರೀಯ ಸಂಸ್ಥೆಗಳ ಸಮಾಜಮುಖಿ ಕಾರ್ಯಕ್ರಮಗಳು ಜನಸಾಮಾನ್ಯರನ್ನು ಅತಿ ಹತ್ತಿರದಿಂದ ತಲುಪುತ್ತದೆ ಅದೇ ರೀತಿ ಒರ್ವ ಕ್ರೀಯಾಶೀಲ ಸದಸ್ಯನ ಅಗಲುವಿಕೆಯನ್ನು ನೇತ್ರ ತಪಾಸಣೆಯ ರೀತಿಯಲ್ಲಿ ಪ್ರತಿವರ್ಷ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹಿರಿಯ ಯಕ್ಷಗುರು ಎಚ್ ಗೋವಿಂದ ಉರಾಳ ಹೇಳಿದರು.
ಭಾನುವಾರ ಕೋಟ ಮೂರ್ಕೆ ಇಂದಿರಾ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ರೋಟರಿ ಕ್ಲಬ್ ಕೋಟ ಸಿಟಿ, ಕರ್ನಾಟಕ ಸರಕಾರ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ, ಕೋಟ ಗ್ರಾಮ ಪಂಚಾಯತ್ ಕೋಟತಟ್ಟು ಇಂದಿರಾ ಕ್ಲಿನಿಕಲ್ ಲ್ಯಾಬೊರೇಟರಿ, ಕೋಟ ಮೂರ್ಕೆ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಇವರ ಸಂಯುಕ್ತ ಆಶ್ರಯದಲ್ಲಿ ದಿ. ರೊ. ಪ್ರದೀಪ್ ಕುಮಾರ್ ಶೆಟ್ಟಿರವರ ಸ್ಮರಣಾರ್ಥ 10ನೇ ವರ್ಷದ ಕಣ್ಣಿನ ಪೊರೆ ರೋಗ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಆರೋಗ್ಯ ಶಿಬಿರ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೀಡುವ ರೋಟರಿ ಕಾರ್ಯವೈಕರಿಯನ್ನು ಪ್ರಶಂಸಿದರು.
ಕೋಟ ಸಮುದಾಯದ ಆರೋಗ್ಯ ಕೇಂದ್ರದ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಮಾಧವ ಪೈ ಕಣ್ಣಿನ ಮಹತ್ವ ಹಾಗೂ ದೇಹದ ಇನ್ನಿತರ ಭಾಗಗಳ ಆರೋಗ್ಯದ ಬಗ್ಗೆ ವಿಸ್ತöÈತವಾಗಿ ಮಾಹಿತಿ ನೀಡಿದರು.
ಮುಖ್ಯ ಅಭ್ಯಾಗತರಾಗಿ ರೋಟರಿ ವಲಯ ಸೇನಾನಿ ನಿತ್ಯಾನಂದ ನಾಯರಿ,ಉದ್ಯಮಿ ಸಂದೀಪ್ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದು ಮನೆ ಇದರ ವೈದ್ಯ ಡಾ. ಮನೋಜ್ ಭಟ್ ಉಪಸ್ಥಿತರಿದ್ದರು.ರೋಟರಿ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್ ಪ್ರಾಸ್ತಾವನೆ ಸಲ್ಲಿಸಿದರು.ರೋಟರಿ ಕ್ಲಬ್ ಕೋಟ ಸಿಟಿ ಮಾಜಿ ಅಧ್ಯಕ್ಷ ವಿಷ್ಣುಮೂರ್ತಿ ಉರಾಳ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ಡಾ.ಗಣೇಶ್ ಉಳ್ತೂರು ನಿರೂಪಿಸಿದರು. ಮಾಜಿ ಅಧ್ಯಕ್ಷ ಸುರೇಶ್ ಆಚಾರ್ ವಂದಿಸಿದರು.ಫಲಾನುಭವಿಗಳಿಗೆ ಕಣ್ಣಿನ ತಪಾಸಣೆಯನ್ನು ಮಾಡಲಾಯಿತು.
ಕೋಟ ಮೂರ್ಕೆ ಇಂದಿರಾ ಕ್ಲಿನಿಕಲ್ ಲ್ಯಾಬೊರೇಟರಿಯಲ್ಲಿ ರೋಟರಿ ಕ್ಲಬ್ ಕೋಟ ಸಿಟಿ, ಕರ್ನಾಟಕ ಸರಕಾರ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ, ಕೋಟ ಗ್ರಾಮ ಪಂಚಾಯತ್ ಕೋಟತಟ್ಟು ಇಂದಿರಾ ಕ್ಲಿನಿಕಲ್ ಲ್ಯಾಬೊರೇಟರಿ, ಕೋಟ ಮೂರ್ಕೆÊ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಇವರ ಸಂಯುಕ್ತ ಆಶ್ರಯದಲ್ಲಿ ದಿ. ರೊ. ಪ್ರದೀಪ್ ಕುಮಾರ್ ಶೆಟ್ಟಿರವರ ಸ್ಮರಣಾರ್ಥ 10ನೇ ವರ್ಷದ ಕಣ್ಣಿನ ಪೊರೆ ರೋಗ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಿರಿಯ ಯಕ್ಷಗುರು ಎಚ್ ಗೋವಿಂದ ಉರಾಳ ಉದ್ಘಾಟಿಸಿದರು. ರೋಟರಿ ವಲಯ ಸೇನಾನಿ ನಿತ್ಯಾನಂದ ನಾಯರಿ,ಉದ್ಯಮಿ ಸಂದೀಪ್ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರರು ಇದ್ದರು.
















Leave a Reply