ಕೋಟ: ಇಲ್ಲಿನ ಕೋಟದ ಮಣೂರು ಕೊಯ್ಕೂರು ಬೊಬ್ಬರ್ಯೇಶ್ವರ ಮತ್ತು ಪರಿವಾರ ದೈವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಹಾಲುಹಬ್ಬ ಮತ್ತು ಗೆಂಡಸೇವೆ ಮಾ.20 ಗುರುವಾರ ಮತ್ತು 21ರ ಶುಕ್ರವಾರ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ 18 ರಂದು ಮಂಗಳವಾರ ರಾತ್ರಿ 9.00 ಗಂಟೆಗೆ ಮಾರಿಪೂಜೆ, 20ರ ಗುರುವಾರ ಬೆಳಿಗ್ಗೆ 9.00 ಗಂಟೆಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ ರಾತ್ರಿ ಗಂಟೆ 8.00ಕ್ಕೆ ಹಾಲುಹಿಟ್ಟು ಸೇವೆ ಮತ್ತು ಗೆಂಡಸೇವೆ ನಂತರ ಅನ್ನಸಂತರ್ಪಣೆ 21ರ ಶುಕ್ರವಾರ ಪೂರ್ವಾಹ್ನ ಗಂಟೆ 6.00ಕ್ಕೆ ಢಕ್ಕೆ ಬಲಿ ಬೆಳಿಗ್ಗೆ 10.00 ಗಂಟೆಯ ನಂತರ ತುಲಾಭಾರ ಸೇವೆ, ಹರಕೆ ಸಮರ್ಪಣೆ, ಹಣ್ಣು ಕಾಯಿ ಸಮರ್ಪಣೆ ಇತ್ಯಾದಿ ಸೇವೆಗಳು ನಡೆಯಲಿದ್ದು ಅದೇ ದಿನ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 9.30ಕ್ಕೆ ಶ್ರೀ ಮಹಿಷಮರ್ದಿನಿ ದಶಾವತಾರ ಯಕ್ಷಗಾನ ಮೇಳ ಶ್ರೀ ಕ್ಷೇತ್ರ ನೀಲಾವರ ಇವರಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮಗಳು ಜಗರಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಮಣೂರು-ಶ್ರೀ ಬೊಬ್ಬರ್ಯೇಶ್ವರ ಮತ್ತು ಪರಿವಾರ ದೈವಸ್ಥಾನ ವಾರ್ಷಿಕ ಜಾತ್ರೆ
















Leave a Reply