
ಕೋಟ: ಇಲ್ಲಿನ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದ ದಶವಾತಾರ ಯಕ್ಷಗಾನ ಮಂಡಳಿಯಲ್ಲಿ ಪ್ರಸಿದ್ಧ ಸ್ತ್ರೀ ವೇಷದಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಾಧವ ಜೋಗಿ ನಾಗೂರು ಇವರ
ಯಕ್ಷಗಾನ ಕ್ಷೇತ್ರದ ರಜತ ಸಂಭ್ರಮದ ಹಿನ್ನಲ್ಲೆಯಲ್ಲಿ ಯಕ್ಷ ಹೆಜ್ಜೆ 2025 ಕಾರ್ಯಕ್ರಮದ ಪೂರ್ವಭಾವಿ ಸಭೆ ಭಾನುವಾರ ಕೋಟದ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ಜರಗಿತು.
ಕೋಟ ಅಮೃತೇಶ್ವರಿ ದೇಗುಲದ ಹಾಗೂ ಮೇಳದ ಯಜಮಾನರಾದ ಆನಂದ್ ಸಿ ಕುಂದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಖೆಗಳ ಬಗ್ಗೆ ಚರ್ಚಿಸಲಾಯಿತು. ಯಕ್ಷ ಚಿಂತಕ ರಾಘವ ಶೆಟ್ಟಿ ಬೇಳೂರು, ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಎಂ ಶಿವ ಪೂಜಾರಿ,ಗಣೇಶ್ ನೆಲ್ಲಿಬೆಟ್ಟು,ದೇಗುಲದ ಪ್ರಧಾನ ಅರ್ಚಕ ಸುಬ್ರಾಯ ಜೋಗಿ, ಮೇಳದ ಮ್ಯಾನೇಜರ್ ಸುರೇಶ್ ಬಂಗೇರ, ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ, ಯಕ್ಷ ಪ್ರೇಮಿ ವೆಂಕಟೇಶ ಪ್ರಭು,ಯಕ್ಷಗುರು. ಕೃಷ್ಣಮೂರ್ತಿ ಉರಾಳ,ಕೋಟ ಪಂಚಾಯತ್ ಸದಸ್ಯ ಚಂದ್ರ ಪೂಜಾರಿ, ಶಿಕ್ಷಕ ಸಂತೋಷ್ ಕುಮಾರ್ ಕೋಟ ಉಪಸ್ಥಿತರಿದ್ದರು.