
ಕೋಟ: ಉತ್ತಮ ಯಕ್ಷಗಾನ ಗುರುಗಳು ನಮ್ಮ ಸಮಾಜದ ಆಸ್ತಿ. ಅವರ ಕಷ್ಟಗಳಿಗೆ ನಾವು ಸ್ಪಂದಿಸುವುದರ ಜೊತೆಗೆ ಅವರ ಸಾಧನೆಯನ್ನು ಮೆಚ್ಚಿ ಗೌರವಿಸುವುದು ನಮ್ಮ ಸಂಸ್ಕಾರ. ಆ ಕಾರ್ಯ ಸಂಘ ಸಂಸ್ಥೆಗಳಿAದ ನಡೆಯಬೇಕಾಗಿದೆ. ಗುರುಗಳು ತಮ್ಮ ವಿದ್ವತ್ತನ್ನು ಸಮಾಜಮಖಕ್ಕೆ ಉತ್ತಮ ರೀತಿಯಲ್ಲಿ ಧಾರೆಯೆರೆದಾಗ ಕಲೆಯ ಅಭಿವೃದ್ಧಿ ಸಾಧ್ಯ. ಎಂದು ಸಿದ್ಧಾಪುರದ ಡಾಕ್ಟರ್ ಜಗದೀಶ ಶೆಟ್ಟಿಯವರು ತಿಳಿಸಿದರು.
ಅವರು ಇತ್ತೀಚೆಗೆ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಇಲ್ಲಿ ಕಲಾಪೀಠ ಕೋಟ ಇವರು ಹಮ್ಮಿಕೊಂಡ ಯಕ್ಷಸಾಧಕ ಪ್ರಶಸ್ತಿ ಪುರಸ್ಕಾರ ಹಾಗೂ ಯಕ್ಷಗಾನ ಉತ್ಸವವನ್ನು ಚಂಡೆ ಬಾರಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಯಕ್ಷ ಸಾಧಕ ಪ್ರಶಸ್ತಿಯನ್ನು ಸ್ವೀಕರಿಸಿದ ಮಂಜುನಾಥ ಕುಲಾಲರಿಗೆ ಪ್ರದಾನಿಸಲಾಯಿತು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿದ್ದರು. ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಕಾರ್ಯಕ್ರಮಕ್ಕೆ ಶುಭ ಕೋರಿದರು , ವಾಗ್ವಿಲಾಸ ಭಟ್ಟ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿದರು. ಕಲಾಪೀಠದ ಕಾರ್ಯದರ್ಶಿ ನರಸಿಂಹ ತುಂಗ ಧನ್ಯವಾದ ಸಲ್ಲಿಸಿದರು. ನಂತರ ಉದಯಕುಮಾರ ಹೊಸಾಳ, ರಾಘವೇಂದ್ರ ಹೆಗಡೆ, ವಾಗ್ವಿಲಾಸ ಭಟ್ಟರ ಹಿಮ್ಮೇಳದೊಂದಿಗೆ ಸಂಸ್ಥೆಯ ಕಲಾವಿದರಿಂದ “ದ್ರೌಪದಿ ಪ್ರತಾಪ” ಯಕ್ಷಗಾನ ಪ್ರದರ್ಶನ ನಡೆಯಿತು.
ಇತ್ತೀಚೆಗೆ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಇಲ್ಲಿ ಕಲಾಪೀಠ ಕೋಟ ಹಮ್ಮಿಕೊಂಡ ಯಕ್ಷ ಸಾಧಕ ಪ್ರಶಸ್ತಿಯನ್ನು ಮಂಜುನಾಥ ಕುಲಾಲರಿಗೆ ಪ್ರದಾನಿಸಲಾಯಿತು. ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಮತ್ತಿತರರು ಇದ್ದರು.