
ಕೋಟ: ಶಾಲಾ ಶಿಕ್ಷಣವು ಹೆಚ್ಚು ಆಕರ್ಷಣೆಯಾಗುವಲ್ಲಿ
ಪ್ರತಿ ತರಗತಿಗೆ ಪ್ರೋಜೆಕ್ಟರ್ ವ್ಯವಸ್ಥೆ ಕಲ್ಪಿಸುವುದು ತುರ್ತಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ಸಮುದಾಯದ ನೆರವು ಅಗತ್ಯವಾಗಿದೆ ಎಂದು ಗೀತಾನಂದ ಫೌoಡೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್ ಹೇಳಿದರು.
ಇದೇ ಸಂದರ್ಭದಲ್ಲಿ ಮಣೂರು ಪಡುಕರೆ ಪ್ರೌಢಶಾಲಾ ವಿಭಾಗದ 2024-2025ನೇ ಸಾಲಿನ ಹತ್ತನೆಯ ತರಗತಿ ವಿದ್ಯಾರ್ಥಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಕೊಡಮಾಡಿದಪ್ರೋಜೆಕ್ಟರ್‌ನ್ನು ಸ್ವೀಕರಿಸಿ
ಅಭಿನಂದನೆಯ ಮಾತನಾಡಿ ಜಿಲ್ಲೆಯಲ್ಲಿಯೇ ಶೈಕ್ಷಣಿಕ
ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ಸoಸ್ಥೆ ಸರಕಾರಿ ಪದವಿಪೂರ್ವ (ಪ್ರೌಢ ಶಾಲಾ ವಿಭಾಗ) ಮಣೂರು ಪಡುಕರೆ ಸಂಸ್ಥೆಯಾಗಿದೆ.
ಇಲ್ಲಿ ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್, ಅಟಲ್ ಟಿಂಕರಿoಗ್ ಲ್ಯಾಬ್, ಸುಸಜ್ಜಿತ ಭೌತಶಾಸ್ತ್ರ , ರಸಾಯನ ಶಾಸ್ತ್ರ ಹಾಗೂ ಜೀವಶಾಸ್ತçದ ಪ್ರತ್ಯೇಕ ಪ್ರಯೊಗಾಲಯವನ್ನು ಹೊಂದಿದ್ದು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೊಡಮಾಡಿದ ಕೊಡುಗೆ ನಿಜಕ್ಕೂ ಶ್ಲಾಘನೀಯ ಭವಿತವ್ಯದಲ್ಲಿ ನಮ್ಮ
ವಿದ್ಯಾರ್ಥಿಗಳ ಸಾಧನೆ ಮಹತ್ತರ ಸ್ಥಾನ ಪಡೆಯಲ್ಲಿ ಎಂದು ವಿದ್ಯಾರ್ಥಿಗಳಿಗೆ ಶುಭಾಷಯವನ್ನು ಸಲ್ಲಿಸಿ ಪ್ರೌಢಶಾಲಾ
ಮುಖ್ಯೋಪಾಧ್ಯಾಯ ವಿವೇಕಾನಂದ ಗಾoವಕಾರ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರಾಘವೇಂದ್ರ ಕಾಂಚನ್
ವಹಿಸಿದ್ದರು. ಸಭೆಯಲ್ಲಿ ಹಿರಿಯ ಶಿಕ್ಷಕರಾದ ರಾಮದಾಸ್
ನಾಯಕ್, ಶಿಕ್ಷಕರಾದ ಅನುಪಮ, ಸುವರ್ಣ ನಾವಡ, ಹೆರಿಯ, ಪೂರ್ಣಿಮಾವತಿ, ರಜನಿ ಪಿ, ರೂಪಾ, ರಾಜೀವ್, ಚಂದ್ರಶೇಖರ್ ಶೆಟ್ಟಿ, ಹರ್ಷಿತಾ, ಶೋಭಾ, ಮಮತಾ, ಮೇಘನಾ, ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಶ್ರೀ,
ಪ್ರಜ್ಞಾ, ಪ್ರತಿಕ್ಷಾ ಅನುಭವ ಹಂಚಿಕೊoಡರು. ಕಿರಿಯ ವಿದ್ಯಾರ್ಥಿಗಳು ಅನುಭವದ ಮಾತನಾಡಿದರು.
ವಿದ್ಯಾರ್ಥಿನಿ ಕುಮಾರಿ ಮೈತ್ರಿ ಸ್ವಾಗತಿಸಿದರು, ಪೂರ್ವಿ
ವಂದಿಸಿದರು ಲಿಖಿತಾ ನಿರೂಪಿಸಿದರು. ಮಣೂರು ಪಡುಕರೆ ಪ್ರೌಢಶಾಲಾ ವಿಭಾಗದ 2024-2025ನೇ ಸಾಲಿನ ಹತ್ತನೆಯ ತರಗತಿ ವಿದ್ಯಾರ್ಥಿಗಳು ಬೀಳ್ಕೊಡುಗೆ
ಸಮಾರಂಭದಲ್ಲಿ ವಿದ್ಯಾರ್ಥಿಗಳು ಕೊಡಮಾಡಿದ ಪ್ರೋಜೆಕ್ಟರ್‌ನ್ನುಪ್ರೌಢಶಾಲಾ ಮುಖ್ಯೋಪಾಧ್ಯಾಯ ವಿವೇಕಾನಂದ ಗಾoವಕಾರ ಸ್ವೀಕರಿಸಿದರು. ಗೀತಾನಂದ
ಫೌoಡೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ
ರಾಘವೇಂದ್ರ ಕಾಂಚನ್, ಹಿರಿಯ ಶಿಕ್ಷಕರಾದ ರಾಮದಾಸ್ ನಾಯಕ್, ಶಿಕ್ಷಕರಾದ ಅನುಪಮ, ಸುವರ್ಣ ನಾವಡ ಮತ್ತಿತರರು ಇದ್ದರು.