
ಸೇವಾಪಥ ಉಡುಪಿ ವತಿಯಿಂದ ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಉದಾತ್ತ ಉದ್ದೇಶದಿಂದ 24 ದಿನಗಳ ಮುಂಬೈಯಿಂದ ಮಂಗಳೂರಿಗೆ 950KM ಮ್ಯಾರಥಾನ್ ಮೂಲಕ ಸಮಾಜ ಜಾಗೃತಿ ಮೂಡಿಸಿದ ರೇಷ್ಮಾ ಮತ್ತು ಗಿರೀಶ್ ಶೆಟ್ಟಿ ದಂಪತಿಗಳಿಗೆ ಉಡುಪಿಯ ಸಮಸ್ತ ನಾಗರಿಕರ ಪರವಾಗಿ ಅಭಿನಂದನಾ ಕಾರ್ಯಕ್ರಮವನ್ನು ಉಡುಪಿಯ ಶಾಸಕರಾದ ಯಶ್ಪಾಲ್ ಎ ಸುವರ್ಣ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೆಮಿಕಲ್ ಆಹಾರದಿಂದ ಅತಿ ಹೆಚ್ಚು ಕ್ಯಾನ್ಸರ್ ಕಂಡು ಬರುತ್ತಿದ್ದು ಹೆಚ್ಚಾಗಿ ಮಕ್ಕಳಲ್ಲೂ ಕ್ಯಾನ್ಸರ್ ಕಂಡುಬರುತಿದ್ದನ್ನು ಗಮನಿಸಿ ಉಡುಪಿ ದಕ್ಷಿಣಕನ್ನಡ ಜಿಲ್ಲೆಯ ಉದ್ಯಮಿಗಳಾದ ಇವರು ಮುಂಬೈಯ ಕರ್ಮಭೂಮಿಯಿಂದ ಜನ್ಮ ಭೂಮಿಯಾದ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು 950ಕಿಲೋ ಮೀಟರ್ ಗಳನ್ನು 24 ದಿನಗಳಲ್ಲಿ ಮ್ಯಾರಥಾನ್ ಮೂಲಕ ಸಮಾಜವನ್ನು ಜಾಗೃತಿ ಅಭಿಯಾನ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ಮಕ್ಕಳ ಕ್ಯಾನ್ಸರ್ ರೋಗಕ್ಕಾಗಿ ಆಸ್ಪತ್ರೆಯನ್ನು ನಿರ್ಮಾಣ ಮಾಡುವನಿಟ್ಟಿನಲ್ಲಿ 24 ದಿನಗಳಲ್ಲಿ 950 ಕಿಮೀ ಓಟದ ಮೂಲಕ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ರೇಷ್ಮಾ ಗಿರೀಶ್ ಶೆಟ್ಟಿ ಇವರು ಕ್ರಮಿಸಿದ್ದಾರೆ ಇದು ಮಾದರಿಯ ವ್ಯಕ್ತಿತ್ವ ,ತಾವು ಬದುಕುದರ ಜೊತೆಯಲ್ಲಿ ಸಮಾಜಕ್ಕಾಗಿ ಬದುಕಬೇಕು ಎನ್ನುವ ಮಾದರಿ ವ್ಯಕ್ತಿತ್ವ ಇವರದ್ದಾಗಿದೆ. ಇದನ್ನು ಗಮನಿಸಿ ಉಡುಪಿಯ ಸಮಸ್ತ ನಾಗರಿಕರ ಪರವಾಗಿ ಗೌರವಿಸುವ ಕಾರ್ಯ ಮಾಡಲಾಗಿದೆ.
ಮನೋಹರ್ ಶೆಟ್ಟಿ ತೋನ್ಸೆ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ
ಸಹಕಾರಿ ಕ್ಷೇತ್ರದ ಹಿರಿಯರಾದ ಇಂದ್ರಾಳಿ ಜಯಕರ್ ಶೆಟ್ಟಿ, ರೋಶನ್ ಶೆಟ್ಟಿ, ಪಂಚರತ್ನ ಪ್ಯಾರಡೈಸ್ ಮಾಲಕರಾದ ಸಂತೋಷ್ ಶೆಟ್ಟಿ,ರಾಧಾಕೃಷ್ಣ ಮೆಂಡನ್ ಮತ್ತಿತರರು ಹಾಜರಿದ್ದರು.
