ಕೋಟ: ಮಹಿಳಾ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಇತ್ತೀಚಿಗೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಕೂಟ ಬಂಧು ಭವನದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಭಜನಾ ತರಬೇತುದಾರೆ ವಿಧುಷಿ ಉಷಾ ಹೆಬ್ಬಾರ್ ಮಣಿಪಾಲ ಭಾಗವಹಿಸಿ ಮಹಿಳಾ ದಿನಾಚರಣೆಯ ಮಹತ್ವ ತಿಳಿಸಿದರು. ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ ಎಸ್ ಕಾರಂತ ಶುಭಾಶoಶನೆಗೈದರು.
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕಿನ ನಿರ್ದೇಶಕಿ ಶಾಂತ ಭಟ್ ಪಾಂಡೇಶ್ವರ ಅಭಿನoದಿಸಲಾಯಿತು..ಕಾರ್ಯಕ್ರಮದಲ್ಲಿ ಹಿರಿಯ ಕ್ರಿಯಾಶೀಲ.ಮಾತೆಯರು ನಾಗರತ್ನ ಹಂದೆ , ವಸುಮತಿ ಹಂದೆ ಹಂದಟ್ಟು , ತಾರಾ ಹಂದೆ,.ಸುಮತಿ ಶಾಸ್ತ್ರೀ,ಲಲಿತಾ ಹಂದೆ ಪಡುಕೆರೆ, ಪಾರ್ವತಿ ಐತಾಳ ಸಾಲಿಗ್ರಾಮ, ವಿಶಾಲಾಕ್ಷಿ ಐತಾಳ ಚಿತ್ರಪಡಿ, ರತ್ನಾವತಿ ಕೊಳ್ಳ ಪಾಂಡೇಶ್ವರ, ಸುಶೀಲ ಹೊಳ್ಳ ಎಂ. ಮಣೂರು, ಸುಶೀಲಾ ಅಧಿಕಾರಿ ಐರೋಡಿ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾಪೋಷಕರಾದ.ಮಂಟಪ ಯಶೋದ ಉಪಾಧ್ಯ, ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ಅಧ್ಯಕ್ಷ ಪಿ.ಸಿ ಹೊಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಂಗಲಿ ನಾವಡ ,ಲತಾ ಹೊಳ್ಳ ,
ಶಿವಪ್ರಭಾ ಅಲ್ಸೆ, ಸುಜಾತ ಬಾಯರಿ , ವನಿತಾ ಉಪಾಧ್ಯ , ಲಲಿತ ಉಪಾಧ್ಯ, ಮಾಲತಿ ರಾವ್,.ವಸುಧ ಉಡುಪ, ರೇವತಿ ಐತಾಳ, ಶ್ಯಾಮಲ ಐತಾಳ,ವಿನಯ ಅಲ್ಸೆ, ವಿದ್ಯಾವತಿ, ಪರಿಚಯ ಪತ್ರ ಓದಿ ಸಹಕರಿಸಿದರು.
ಕಾರ್ಯಕ್ರಮದ.ಅಧ್ಯಕ್ಷತೆಯನ್ನು ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ.ಸಿ.ಹೊಳ್ಳ ವಹಿಸಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸದಸ್ಯೆ ಪೂರ್ಣಿಮಾ ಅಧಿಕಾರಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಉಪಾಧ್ಯಕ್ಷೆ
ವಿಜಯಲಕ್ಷ್ಮೀ ತುಂಗ ವಂದಿಸಿದರು. ಪ್ರೊ. ಉಪೇಂದ್ರ ಸೋಮಯಾಜಿ ಚಿತ್ರಪಾಡಿ ಇವರು ರಚಿಸಿ ನಿರ್ದೇಶಿಸಿದ ನಾಟಕ ಮಹಾ ಶಪಥ ಮಹಾಲಕ್ಷ್ಮೀ ಸೋಮಯಾಜಿ ಮತ್ತು ತಂಡದವರಿoದ ಪ್ರದರ್ಶನಗೊಂಡಿತು. ಮಹಿಳಾ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಹಿರಿಯ ಕ್ರಿಯಾಶೀಲ ಮಾತೆಯರು ನಾಗರತ್ನ ಹಂದೆ , ವಸುಮತಿ ಹಂದೆ ಹಂದಟ್ಟು , ವಿಗ್ ಹಂದೆ, ಸುಮತಿ ಶಾಸ್ತ್ರೀ , ಲಲಿತಾ ಹಂದೆ ಪಡುಕೆರೆ, ಪಾರ್ವತಿ ಐತಾಳ ಸಾಲಿಗ್ರಾಮ, ವಿಶಾಲಾಕ್ಷಿ ಐತಾಳ ಚಿತ್ರಪಡಿ, ರತ್ನಾವತಿ ಕೊಳ್ಳ ಪಾಂಡೇಶ್ವರ, ಸುಶೀಲ ಹೊಳ್ಳ ಎಂ. ಮಣೂರು, ಸುಶೀಲಾ ಅಧಿಕಾರಿ ಐರೋಡಿ ಇವರನ್ನು ಗೌರವಿಸಲಾಯಿತು.