ಕೋಟ: ಕೋಟ ಪೇಟೆಯಲ್ಲಿ ಗಜಾನನ ಶೆಣೈ ಮಾಲಿಕತ್ವದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ
ಪ್ರಾಯೋಜಿತ ನಂದಿನಿ ಹಾಲಿನ ವಿವಿಧ ಉತ್ಪನ್ನ ಮಳಿಗೆಯನ್ನು ಉದ್ಯಮಿ ಆನಂದ್ ಸಿ ಕುಂದರ್ ಉದ್ಘಾಟಿಸಿ ಮಾತನಾಡಿದ ಆನಂದ್ ಸಿ ಕುಂದರ್ ಅವರು ಕೋಟ ಪೇಟೆಯಲ್ಲಿ ಗಜಾನನ ಶೆಣೈ ಅವರ ಮಾಲಕತ್ವದಲ್ಲಿ ಇಂದು ನಂದಿನಿ ಉತ್ಪನ್ನ ಮಳಿಗೆ ತೆರೆದಿದ್ದು. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನೀಡಲಿದ್ದಾರೆ.
ಅಲ್ಲದೆ ನಂದಿನಿ ಬ್ರಾಂಡ್ ನ ಎಲ್ಲಾ ತರದ ಉತ್ಪನ್ನಗಳನ್ನು ಹೊಂದಿದೆ. ಇದು ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ
ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಬಿ.ಕುಂದರ್, ಕೋಟ ಕಾಶೀಮಠದ ವೇ.ಮೂ. ದೇವದತ್ತ ಭಟ್,ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷರಾದ ಸತೀಶ್ ಎಚ್ ಕುಂದರ್, ಸಮಾಜ ಸೇವಕ ಶ್ರೀಕಾಂತ್ ಶೆಣೈ,ಗೋಪಾಲ್ ಬಂಗೇರ ಕೋಟ, ನಾಗರಾಜ್ ಕೋಟ, ಧರ್ಮೇಂದ್ರ, ನಾಗೇoದ್ರ ಪುತ್ರನ್,ಪಂಚಾಯತ್ ಸದಸ್ಯ ಚಂದ್ರ ಪೂಜಾರಿ, ಮೊದಲದವರು ಉಪಸ್ಥಿತರಿದ್ದರು.