ಕೋಟ: ಓಂ ಸ್ಟಾರ್ ಫ್ರೆಂಡ್ಸ್ ಕೋಟ ಗೊಬ್ಬರಬೆಟ್ಟು, ಇವರ
25ನೇ ವರ್ಷದ ವಾರ್ಷಿಕೋತ್ಸವ ರಜತ ಸಂಭ್ರಮ ಪ್ರಯುಕ್ತ ಪೋಸ್ಟರ್ ಅನ್ನು ಇತ್ತೀಚಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ಧರ್ಮದರ್ಶಿ ಆನಂದ್ ಸಿ ಕುಂದರ್ ಅನಾವರಣಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಫ್ರೆಂಡ್ಸ್ನ ಸಂಘಟಕರು
ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ, ಸಂಗೀತ ಹಾಗೂ ಯಕ್ಷ ನಕ್ಷತ್ರ ಕಿರಾಡಿ ಹಾಗೂ ಬಡಗುತಿಟ್ಟಿನ ಅಪ್ರತಿಮ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ವೀರ ಚಂದ್ರಹಾಸ ಎoಬ ಪೌರಾಣಿಕ ಪ್ರಸಂಗ ಜರಗಲಿದೆ.