ಕೋಟ: ಸರಕಾರಿ ಶಾಲೆಗಳ ಉಳಿವಿಗೆ ಪೋಷಕರ ಹಾಗೂ ಹಿಂದಿನ ವಿದ್ಯಾರ್ಥಿಗಳ ಪಾತ್ರ ಮಹತ್ವವಾದದ್ದು ಎಂದು ಬ್ರಹ್ಮಾವರ ವಲಯ ಶಿಕ್ಷಣ ಸಂಯೋಜಕ ಉದಯ್
ಕುಮಾರ್ ಹೇಳಿದರು. ಶನಿವಾರ ಕೋಟತಟ್ಟು ಪಡುಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಗೆ ಉಡುಪಿಯ
ರೋಬೋ ಸಾಫ್ಟ್ ಕಂಪನಿ ಕೊಡಮಾಡಿದ ಲಾಪ್ ಟಾಪ್, ಪ್ರೊಜೆಕ್ಟರ್, ಯುಪಿಎಸ್ ಇದರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಸರಕಾರಿ ಶಾಲೆಗಳ ದಾಖಲಿಕರಣದಲ್ಲಿ ಪೈಪೋಟಿ ನೀಡುತ್ತಿದ್ದು ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು ಇದಕ್ಕೆ ಕಾರಣವಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಮೂಹಕ್ಕೆ ಒಳಗಾಗದೆ ತಮ್ಮ
ಭಾಗದಲ್ಲಿ ಸರಕಾರಿ ಶಾಲೆಗಳಲ್ಲೆ ಮಕ್ಕಳಿಗೆ ಮೌಲ್ಯಭರಿತ ಶಿಕ್ಷಣ ನೀಡಿ ಎಂದರಲ್ಲದೆ ಸರಕಾರಿ ಶಾಲೆಗಳ ಉನ್ನತಿಯಲ್ಲಿ ಖಾಸಗಿ ಕಂಪನಿಗಳ ಸಿಎಸ್ ಆರ್ ಫಂಡ್ ಹೆಚ್ಚು ವಿನಿಯೋಗವಾಗುತ್ತಿದ್ದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಇದೇ ವೇಳೆ ರೋಬೋ ಸಾಫ್ಟ್ ಕಂಪನಿಯ ಎಚ್.ಆರ್ ಮಧುರಾ ಶೆಟ್ಟಿ ಶಾಲೆಯ ಮುಖ್ಯ ಶಿಕ್ಷಕಿ ಜಾನಕಿ ಭಟ್ ಇವರಿಗೆ ಕೊಡುಗೆಗಳನ್ನು ಹಸ್ತಾಂತರಿಸಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸುಲೇಮಾನ್ ಸಾಹೇಬ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಶಾಲಾ ರೋಬೋ ಕಂಪನಿಯ ಶರತ್, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯೆ ವಿದ್ಯಾ ಸಾಲಿಯಾನ್,
ಮಾತೆಯರ ಸಮಿತಿ ಅಧ್ಯಕ್ಷೆ ಅನಿತಾ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಜಾನಕಿ ಭಟ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಗಣೇಶ್ ಆಚಾರ್ ನಿರೂಪಿಸಿ ವಂದಿಸಿದರು. ಕೋಟತಟ್ಟು ಪಡುಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಬೋ ಸಾಫ್ಟ್ ಕಂಪನಿಯ ಎಚ್ಆರ್ ಮಧುರಾ ಶೆಟ್ಟಿ ಶಾಲೆಯ ಮುಖ್ಯ ಶಿಕ್ಷಕಿ ಜಾನಕಿ ಭಟ್ ಇವರಿಗೆ ಕೊಡುಗೆಗಳನ್ನು ಹಸ್ತಾಂತರಿಸಿದರು.
ಕೋಟತಟ್ಟು ಪಡುಕರೆ ಶಾಲೆಗೆ ರೋಬೋ ಸಾಫ್ಟ್ ಕೊಡುಗೆ
















Leave a Reply