ಕೋಟ: ಕೋಟದ ಪಡುಕರೆಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾ
ಕೂಟವನ್ನು ಇತ್ತೀಚಿಗೆ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಗೀತಾನಂದ ಫೌoಡೇಶನ್ ಮಣೂರು ಇದರ
ಪ್ರವರ್ತಕ ಆನಂದ ಸಿ ಕುಂದರ್ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಜೀವನದಲ್ಲೇ ಕ್ರೀಡೆ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿಕೊಳ್ಳಬೇಕು, ಆಗ ಮಾತ್ರ ದೊಡ್ಡ ಮಟ್ಟದ ಸಾಧನೆಗೆ ಸಾಧ್ಯವಿದೆ ಎಂದರು.
ಕ್ರೀಡೆಯಲ್ಲಿ ಭಾಗವಹಿಸುದರ ಮೂಲಕ ರಾಷ್ಟ್ರ ,
ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿ ಭಾರತದ ಕೀರ್ತಿ ಹೆಚ್ಚಿಸಿ, ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ
ತೊಡಗಿಸಿಕೊಳ್ಳಬೇಕು ಈ ಮೂಲಕ ವಿವಿಧ ರೀತಿಯ ಉದ್ಯೋಗಾವಕಾಶವನ್ನು ಕಾಣಲು ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ಇತ್ತರಲ್ಲದೆ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜೇಂದ್ರ ಎಸ್ ನಾಯಕ ವಹಿಸಿದ್ದರು.ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರಮೇಶ್ ಹೆಚ್ ಕುಂದರ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಪ್ರೊ.ರಮೇಶ ಆಚಾರ್ ಉಪಸ್ಥಿತರಿದ್ದರು. ಮುಖ್ಯ ಅಭ್ಯಾಗತರಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮಣೂರು-ಪಡುಕರೆ ಇದರ ಪ್ರಾಂಶುಪಾಲ ಡೆನಿಸ್ ಬಾಂಜಿ, ಸoಯುಕ್ತ ಪ್ರೌಢ ಶಾಲೆ ಇದರ ಮುಖ್ಯೋಪಾಧ್ಯಾಯ ವಿವೇಕಾನಂದ ಗಾoವ್ಕರ್, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಮಂಜುನಾಥ ಕೆ.ಎಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದಿನ, ಕ್ರೀಡಾ ಕಾರ್ಯದರ್ಶಿ ಶೇಯಸ್, ಅಂತಿಮ ಬಿ.ಕಾo ಸಹ ಕಾರ್ಯದರ್ಶಿಯಾದ ರಕ್ಷಾ ಅಂತಿಮ ಬಿ.ಕಾಂ ಉಪಸ್ಥಿತರಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಮನೋಜ್ಕುಮಾರ್. ಎಂ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಮಮತ ನಿರೂಪಿಸಿದರು. ಬೋಧಕ- ಬೋಧಕೇತರ ವೃಂದದವರು ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ಸಹಕರಿಸಿದರು. ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರಾದ ನಾರಾಯಣ ಮೊಗವೀರ, ಪ್ರೌಢ ಶಾಲಾ ದೈಹಿಕ ಶಿಕ್ಷಕರಾದ ಚಂದ್ರಶೇಖರ ಶೆಟ್ಟಿ ಹಾಗೂ ಕುಮಾರ ತೀರ್ಪುಗಾರರಾಗಿ ಸಹಕರಿಸಿದರು.
ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ ಕಾಲೇಜಿನ ವಾರ್ಷಿಕ ಕ್ರೀಡಾಕೂಟ
















Leave a Reply