ಕೋಟ: ಇಲ್ಲಿನ ಕರಾವಳಿಯ ಕಡಲ ತಡಿಯಲ್ಲಿ ನೆಲೆಯೂರಿದ ಶಿರಸಿಮಾರಿಕಾಂಬೆ ಪ್ರಸಿದ್ಧ ಕ್ಷೇತ್ರವಾಗಿ ಭಕ್ತರನ್ನು ಹರಸುತ್ತಿದ್ದಾಳೆ ಎಂದು ಕೋಟದ ಅಮೃತೇಶ್ವರಿ ದೇಗುಲದ ಧರ್ಮದರ್ಶಿ ಆನಂದ್ ಸಿ ಕುಂದರ್ ನುಡಿದರು.
ಭಾನುವಾರ ಕೋಟತಟ್ಟು ಪಡುಕರೆ ಶ್ರೀ ಶಿರಸಿ ಮಾರಿಕಾಂಬಾ ದೇಗುಲದ ಪುನರ್ ಪ್ರತಿಷ್ಠೆ,ವಾರ್ಷಿಕ ವರ್ಧಂತ್ಯುತ್ಸವ ಬ್ರಹ್ಮ ಕಲಶಾಭಿಷೇಕ, ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ ಕಡಲ ಮಕ್ಕಳ ಆರಾಧ್ಯ ದೇವಿಯಾಗಿ ಭಕ್ತರ ಇಷ್ಟಾರ್ಥವನ್ನು ಸಲಹುತ್ತಿದ್ದಾಳೆ ಜಗದ ಹಸಿವು ನಿಗಿ ಧಾರ್ಮಿಕ ಶಕ್ತಿಯ ಕೇಂದ್ರವಾಗಿ ಮಾರಿಕಾಂಬೆ ವಿವಿಧ ಭಾಗಗಳಲ್ಲಿ ನೆಲೆಯೂರಿದ್ದಾಳೆ,ಈ ನಿಟ್ಟಿನಲ್ಲಿ ಇಲ್ಲಿನ ಈ ಕ್ಷೇತ್ರ ತನ್ನದೆ ಆದ ವೈಶಿಷ್ಟತೆಯನ್ನು ಹೊಂದಿದೆ ಎಂದರಲ್ಲದೆ ಪ್ರತಿಯೊಬ್ಬರಲ್ಲೂ ಧಾರ್ಮಿಕ ಪ್ರಜ್ಞೆ ಮೂಡಲಿ ಎಂದು ಹಾರೈಸಿದರು.
ದೇಗುಲದ ಧಾರ್ಮಿಕ ವಿಧಿ ವಿಧಾನಗಳನ್ನು ವೇ.ಮೂ.ಮಧುಸೂದನ ಬಾಯರಿ ನೇತೃತ್ವದಲ್ಲಿ ದೇಗುಲದ ಅಧ್ಯಕ್ಷ ರಮೇಶ್ ಪೂಜಾರಿ ದಂಪತಿಗಳ ಮೂಲಕ ನೆರವೆರಿತು.
ದೇಗುಲದಲ್ಲಿ ಪ್ರಾರ್ಥನೆ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ,ಗಣೇಶ ಪೂಜೆ,ಸ್ಥಾನ ಶುದ್ಧಿ ಪ್ರಸಾದ ಶುದ್ಧಿ, ವಾಸ್ತು ಪೂಜೆ, ಬಲಿ, ರಾಕ್ಷೋಘ್ನ ಹೋಮ, ಅಧಿವಾಸ ಪೂಜೆ, ಅಧಿವಾಸ ಹೋಮ, ರತ್ನನ್ಯಾಸ ಪೂರ್ವಕ ಶ್ರೀದೇವಿ ಪ್ರತಿಷ್ಠೆ ತದಂಗ ನ್ಯಾಸಾದಿಗಳು ಶನಿವಾರ ರಾತ್ರಿ ನಡೆದವು. ಭಾನುವಾರ ಪಂಚವಿAಶತಿ ದ್ರವ್ಯ ಕಲಶ ಪೂರ್ವಕ 108 ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ,ಅಧಿವಾಸ ಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಹಾಪ್ರಸಾದ ವಿತರಣೆ, ಅಪರಾಹ್ನ ಮಹಾ ಅನ್ನ ಸಂತರ್ಪಣೆ ಜರಗಿತು.
ಶ್ರೀ ದೇಗುಲದ ಶ್ರೀಮಾರಿಕಾಂಬಾ ಮಹಿಳಾ ಭಜನಾ ತಂಡ ಹಾಗೂ ಕೋಟದ ಪಂಚವರ್ಣ ಮಹಿಳಾ ಭಜನಾ ತಂಡ,ಭಗವತ್ ಭಜನಾ ತಂಡ ಪಡುಕರೆ ಇವರಿಂದ ಭಜನಾ ಕಾರ್ಯಕ್ರಮ ಸಂಪನ್ನಗೊoಡಿತು. ಸಾoಸ್ಕತಿಕ ಕಾರ್ಯಕ್ರಮದ ಸಲುವಾಗಿ ಸ್ಥಳೀಯ ಪ್ರತಿಭೆಗಳ ಸಂಗೀತ ರಸಮಂಜರಿ,ಫಿಲ್ಮಿಡಾನ್ಸ್, ಯಕ್ಷಸೌರಭ. ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ ಇವರಿಂದ ನಾಲ್ಕು ಪಾದದ ಹಾಗೈಳಿ ಕೋಳೆರಾಯ ಮಾವನ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.
ಶ್ರೀದೇವಿದ ದರ್ಶನವನ್ನು ನಂದಿ ಪೂಜಾರಿ ನೆರವೆರಿಸಿದರು. ದೇಋಗುಲದ ಅರ್ಚಕರಾದ ನಂದ್ಯಪ್ಪ ಪೂಜಾರಿ ಸಹ ಅರ್ಚಕ ಚಂದ್ರ ಪುತ್ರನ್ ಬಾರ್ಕೂರು ,ದೇಗುಲದ ಅಧ್ಯಕ್ಷ ರಮೇಶ್ ಪೂಜಾರಿ, ಕಾರ್ಯದರ್ಶಿ ಮಂಜುನಾಥ ನಾಯ್ಕ್,ಕೋಶಾಧಿಕಾರಿ ನಾಗಪ್ಪ ಪೂಜಾರಿ, ವಿನಯ ಕುಂದರ್, ಉಪಾಧ್ಯಕ್ಷರಾದ ಚಂದ್ರ ಪುತ್ರನ್, ಜತೆಕಾರ್ಯದರ್ಶಿ ರಾಜೇಂದ್ರ,ಅರುಣ್ ಸಾಲಿಯಾನ್, ಸತೀಶ್ ಮೆಂಡನ್, ಗೌರವ ಸಲಹೆಗಾರ ಸಂಜೀವ ಆರ್ ಕುಂದರ್, ಬಸವ ಕುಂದರ್, ಸಿದ್ಧಿ ಶ್ರೀನಿವಾಸ ಪೂಜಾರಿ, ಕೃಷ್ಣ ಪುತ್ರನ್ , ಉದಯ್ ತಿಂಗಳಾಯ, ಪ್ರಭಾಕರ್ ತಿಂಗಳಾಯ, ರಘು ಪೂಜಾರಿ, ಅಶೋಕ್ ಪೂಜಾರಿ, ಅಣ್ಣಪ್ಪ ತಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು.
ಕೋಟತಟ್ಟು ಪಡುಕರೆ ಶ್ರೀ ಶಿರಸಿ ಮಾರಿಕಾಂಬಾ ದೇಗುಲದ ಪುನರ್ ಪ್ರತಿಷ್ಠೆ,ವಾರ್ಷಿಕ ವರ್ಧಂತ್ಯುತ್ಸವ ಬ್ರಹ್ಮ ಕಲಶಾಭಿಷೇಕ, ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಕೋಟದ ಅಮೃತೇಶ್ವರಿ ದೇಗುಲದ ಧರ್ಮದರ್ಶಿ ಆನಂದ್ ಸಿ ಕುಂದರ್ ಮಾತನಾಡಿದರು. ದೇಗುಲದ ಅಧ್ಯಕ್ಷ ರಮೇಶ್ ಪೂಜಾರಿ,ಕಾರ್ಯದರ್ಶಿ ಮಂಜುನಾಥ ನಾಯ್ಕ್,ಕೋಶಾಧಿಕಾರಿ ನಾಗಪ್ಪ ಪೂಜಾರಿ,ವಿನಯ ಕುಂದರ್,ಉಪಾಧ್ಯಕ್ಷರಾದ ಚಂದ್ರ ಪುತ್ರನ್ ಮತ್ತಿತರರು ಇದ್ದರು.

















Leave a Reply