Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನ-ಅನ್ಯೋನ್ಯತಾ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಆಯ್ಕೆ

ಕೋಟ: ಅನ್ಯೋನ್ಯತಾ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಸಾಸ್ತಾನದ ವಾರ್ಷಿಕ ಮಹಾಸಭೆ ಇತ್ತೀಚಿಗೆ ಸವಿನಯ ಯುವಕ ಮಂಡಲದ ಕಛೇರಿಯಲ್ಲಿ ಜರಗಿತು. ಸಂಘದ ಸದಸ್ಯರಾದ ಅಣಲಾಡಿ ಮಠದ ಆಡಳಿತ ಮಂಡಳಿಯಲ್ಲಿ ಸದಸ್ಯರಾಗಿ ಆಯ್ಕೆಗೊಂಡ ವಿಜಯ ಪೂಜಾರಿ, ಹಿರಿಯ ಸದಸ್ಯ ನಾರಾಯಣ್ ಮತ್ತು ಮಕ್ಕಳ
ಕುಣಿತ ಭಜನಾ ತಂಡದ ತರಬೇತುದಾರರಾದ ಕೃಷ್ಣ ಬಂಗೇರ ಇವರುಗಳನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಇದೇ ವೇಳೆ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ನಡೆಯಿತು. ನೂತನ ಅಧ್ಯಕ್ಷರಾಗಿ ರವಿ ಪೂಜಾರಿ ಎಡಬೆಟ್ಟು, ಕಾರ್ಯದರ್ಶಿ ಶಂಕರ್ ಪೂಜಾರಿ ಬೆಣ್ಣೆಕುದ್ರು, ಖಜಾಂಚಿ ರಾಘವೇಂದ್ರ
ಗಾಣಿಗ ಚಲ್ಲಮಕ್ಕಿ, ಉಪಾಧ್ಯಕ್ಷರಾಗಿ ಸ್ಟಾಸ್ಟೇನಿ ವರ್ಗಿಸ್, ಜತೆ ಕಾರ್ಯದರ್ಶಿಯಾಗಿ ಚಂದ್ರ ಪೂಜಾರಿ ಆಯ್ಕೆಯಾದರು. ಮಾಜಿ ಅಧ್ಯಕ್ಷ ವಿಜಯ ಪೂಜಾರಿ ಸ್ವಾಗತಿಸಿ, ಸಂಘದ ಸದಸ್ಯರಾದ ಕೃಷ್ಣ ಬಂಗೇರ ವರದಿ ಮಂಡಿಸಿ, ಮಾಜಿ ಖಜಾಂಚಿ ರಾಘವೇಂದ್ರ ಪೂಜಾರಿ ವಾರ್ಷಿಕ ಲೆಕ್ಕಾಚಾರ ಮಂಡಿಸಿದರು, ಮಾಜಿ ಕಾರ್ಯದರ್ಶಿ ಭಾಸ್ಕರ್ ಪುತ್ರನ್ ಸಭೆಯನ್ನು ನಿರ್ವಹಿಸಿದರು.

Leave a Reply

Your email address will not be published. Required fields are marked *