
ಕೋಟ: ಭಾರತೀಯ ಅಂಚೆ ವಿಭಾಗ ಉಡುಪಿ ಮತ್ತು ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇವರ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಮಾ.22ರಂದು ಕಾರ್ಯಕ್ರಮ ಜರಗಿತು.
ಕಾರ್ಯಕ್ರಮವನ್ನು ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇದರ ಗೌರವಾಧ್ಯಕ್ಷ ರಾಜೇಶ್
ಉಪಾಧ್ಯಾಯ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಕುಂದಾಪುರ ದಕ್ಷಿಣ ಉಪವಿಭಾಗ ಅಂಚೆ ನಿರೀಕ್ಷಕ ನಾಗಾಂಜಿನೇಯಲು ಅಂಚೆಯಲ್ಲಿ ಕುoದಾಪುರ ದಕ್ಷಿಣ ಉಪವಿಭಾಗ ಸಿಗುವ ವಿವಿಧ ಸೇವೆಗಳ ಬಗ್ಗೆ ಉಪಯುಕ್ತ
ಮಾಹಿತಿಯನ್ನು ತಿಳಿಸಿದರು.
ಉಡುಪಿ ವಿಭಾಗ ಅಂಚೆ ಅಧೀಕ್ಷಕ ರಮೇಶ್ ಪ್ರಭು , ಕುಂದಾಪುರ ದಕ್ಷಿಣ.ಉಪವಿಭಾಗ ಅಂಚೆ ಸಹಾಯಕ
ಸಂದೇಶ್,ಅoಚೆ ಮೇಲ್ವಿಚಾರಕ ಮಹೇಂದ್ರ ಯು.ಎಸ್ , ವಿನ್‌ಲೈಟ್ ಸ್ಪೋರ್ಟ್ ಕ್ಲಬ್‌ನ ಅಧ್ಯಕ್ಷ ರಮೇಶ್.ಪೂಜಾರಿ, ಕಾರ್ಯದರ್ಶಿ ಸುಧಾಕರ್ ಪೂಜಾರಿ, ಖಜಾಂಜಿ ರವಿ ಹಾಗೂ ಮಾಜಿ ಅಧ್ಯಕ್ಷ ಗಿರೀಶ್ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರು ಆಧಾರ್ ತಿದ್ದುಪಡಿಯ ಪ್ರಯೋಜನವನ್ನು ಪಡೆದರು. ಕಾರ್ಯಕ್ರಮವನ್ನು ದೇವೇಂದ್ರ ಶ್ರೀಯನ್ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು. ಭಾರತೀಯ ಅಂಚೆ ವಿಭಾಗ ಉಡುಪಿ ಮತ್ತು ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವನ್ನು ವಿನ್ ಲೈಟ್ ಸ್ಪೋರ್ಟ್್ಸ ಕ್ಲಬ್
ಪಾರಂಪಳ್ಳಿ ಸಾಲಿಗ್ರಾಮ ಇದರ ಗೌರವಾಧ್ಯಕ್ಷ ರಾಜೇಶ್ ಉಪಾಧ್ಯಾಯ ಉದ್ಘಾಟಿಸಿದರು. ಕುಂದಾಪುರ ದಕ್ಷಿಣ
ಉಪವಿಭಾಗ ಅಂಚೆ ನಿರೀಕ್ಷಕ.ನಾಗಾಂಜಿನೇಯಲು, ವಿನ್‌ಲೈಟ್ ಸ್ಪೋರ್ಟ್ ಕ್ಲಬ್‌ನ ಅಧ್ಯಕ್ಷ ರಮೇಶ್ ಪೂಜಾರಿ,
ಕಾರ್ಯದರ್ಶಿ ಸುಧಾಕರ್ ಇದ್ದರು.
Leave a Reply