Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಳೆಗಾಲಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳುವ ಬಗ್ಗೆ ಕರವೇ ಜಿಲ್ಲಾಧ್ಯಕ್ಷ  ಸುಜಯ್ ಪೂಜಾರಿ

ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿಎ ನಾರಾಯಣ ಗೌಡರ ಆದೇಶದಂತೆ ಮಳೆಗಾಲಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳುವ ಬಗ್ಗೆ ಉಡುಪಿ ಕರವೇ ಜಿಲ್ಲಾಧ್ಯಕ್ಷ  ಸುಜಯ್ ಪೂಜಾರಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರುಗಳು ಸೇರಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಯಾದ  ಡಾಕ್ಟರ್.ಕೆ ವಿದ್ಯಾ ಕುಮಾರಿ  ಅವರಿಗೆ ಮನವಿ ಸಲ್ಲಿಸಿದರು.

ಪ್ರಸ್ತುತ ಮಳೆಗಾಲ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಮಳೆಗಾಲಕ್ಕೆ ಸಜ್ಜುಗೊಳಿಸಬೇಕಾಗಿರುತ್ತದೆ. ಚರಂಡಿ ಹೂಳು ಎತ್ತುವುದು, ಸೇತುವೆ ಸರಿಪಡಿಸುವುದು, ರಸ್ತೆಯ ಮೇಲೆ ಅಪಾಯಕಾರಿಯಾಗಿ ಬೆಳೆದು ನಿಂತ ಮರದ ಗೆಲ್ಲುಗಳನ್ನು ಕಡಿಸಲು ಕ್ರಮ ಕೈಗೊಳ್ಳಬೇಕಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಧಾನವಾಗಿ ಸಾಗುತ್ತಿರುವ ರಸ್ತೆ ಕಾಮಗಾರಿಗೆ ಚುರುಕು ನೀಡಿ ಮಳೆಗಾಲಕ್ಕೆ ಸರಿಯಾಗಿ ಸನ್ನದ್ಧವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚನೆ ಸೂಕ್ತ ಆದೇಶ ನೀಡಿದಲ್ಲಿ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ಬಿರುಗಾಳಿ ನೆರೆ ಹಾವಳಿ ತಡೆಗಟ್ಟುವುದಕ್ಕೆ ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಳ್ಳಲು ಕ್ರಮ ತೆಗೆದುಕೊಳ್ಳಬೇಕಾಗಿರುತ್ತದೆ.

ಮಾನ್ಯರಾದ ತಾವು ನಮ್ಮ ಈ ಮನವಿಯನ್ನು ಪರಿಶೀಲಿಸಿ ಈ ಮೇಲಿನ ವಿಷಯಕ್ಕೆ ಸಂಬಂಧಿಸಿ ಸೂಕ್ತ ಕ್ರಮಕೈಗೊಳ್ಳಬೇಕಾಗಿ ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ , ಡಾ. ಕೆ.ವಿದ್ಯಾಕುಮಾರಿ ಯವರು ನಮ್ಮ ಮನವಿಗೆ ಎಲ್ಲಾ ರೀತಿಯ ಮಳೆಗಾಲಕ್ಕೆ  ಪೂರ್ವ ಸಿದ್ಧತೆ ಕೈಗೊಳ್ಳುವ ಬಗ್ಗೆ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.

ಈ ಉಪಸ್ಥಿತಿಯಲ್ಲಿ ಕರವೇ ಜಿಲ್ಲಾಧ್ಯಕ್ಷರು.ಸುಜಯ್ ಪೂಜಾರಿ ಉಪಾಧ್ಯಕ್ಷರು ಗೋಪಾಲ್ ದೊರೆ. ಮಹಿಳಾ ಜಿಲ್ಲಾಧ್ಯಕ್ಷರು ಗೀತಾ ಪಂಗಾಳ. ಕಾರ್ಯದರ್ಶಿ ಸಿದ್ದಣ್ಣ ಪೂಜಾರಿ ಕಾರ್ಯದರ್ಶಿ ವಿಜಯ ಪೂಜಾರಿ. ಸಂಘಟನಾ ಕಾರ್ಯದರ್ಶಿ ಅಲ್ಫೋನ್ಸ್. ಜಿಲ್ಲಾ ಸಂಚಾಲಕರು ರತ್ನಾಕರ್  ಪೂಜಾರಿ ಮಹಿಳಾ ಉಪಾಧ್ಯಕ್ಷರು ದೇವಕಿ ಬಾರ್ಕೂರು.  ಜಿಲ್ಲಾ ಜಾಲತನ ಸಂಚಾಲಕೀಯ ರಶ್ಮಿ. ಜಿಲ್ಲಾ ಮಹಿಳಾ ಕಾರ್ಯದರ್ಶಿ ಚಂದ್ರಕಲಾ. ಜಿಲ್ಲಾ ಸದಸ್ಯರು   ಮಲ್ಲು. ರೇಣುಕಾ. ಸಾವಿತ್ರಿ. ದೇವರಾಜ್. ಮೈಬೂಬ್. ವಿಶ್ವನಾಥ್. ಶಿವರಾಜ್.. ಹುಲುಗಪ್ಪ.ಇದ್ದರು.

Leave a Reply

Your email address will not be published. Required fields are marked *