ವರದಿ : ಅಶ್ವಿನಿ ಅಂಗಡಿ
ಧಾರವಾಡ: ಚಿಲಿಪಿಲಿ ಸಂಸ್ಥೆಯು 6 ರಿಂದ 14 ವರ್ಷದ ಮಕ್ಕಳಿಗಾಗಿ ಏ.2 ರಿಂದ ಮೇ.5 ರವರೆಗೆ ನಗರದ ಜಿಲ್ಲಾ ಡಯಟ್ ಕಾಲೇಜ್ ಆವರಣದಲ್ಲಿ 30ನೇ “ಚಿಣ್ಣರ ಮೇಳ” ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಮಕ್ಕಳು ಬೇಸಿಗೆ ದಿನಗಳ ಬಾಲ್ಯವನ್ನು ಅಜ್ಜ-ಅಜ್ಜಿ ಮನೆಯಲ್ಲಿ ಕಳೆಯುವಂತೆಯೇ ವಾತಾವರಣ ಈ ಶಿಬಿರದಲ್ಲಿ ಇರುವುದು. ಹಳ್ಳಿಯ ಆಟಗಳು, ಗಡಿಗೆಯಲ್ಲಿ ಅಡುಗೆ, ಕಥೆ ಕೇಳು, ಕಥೆ ಕಟ್ಟು ಕವಿತೆ ಓದು ಕವಿತೆ ಕಟ್ಟು ಗೊಂಬೆ ತಯಾರಿಕೆ, ಮಣ್ಣಿನಲ್ಲಿ ಆಟ, ಪೇಪರ್ ಕ್ರಾಫ್ಟ್ ಮನೋವಿಜ್ಞಾನಿಗಳೊಂದಿಗೆ ಪಾಲಕರು, ಮಕ್ಕಳೊಂದಿಗೆ ಆಪ್ತ ಸಮಾಲೋಚನೆಚರ್ಚೆ, ಮಕ್ಕಳ ಸಂತೆ, ಪ್ರಥಮ ಚಿಕಿತ್ಸೆ ಮಾಹಿತಿ, ಕ್ಯಾಂಪ್ ಫೈಯರ್, ಚಿತ್ರಕಲೆ, ನಾಟಕ ಚಟುವಟಿಕೆಗಳು ಇರುವವು. ಆಯಾ ವಿಷಯದ ಮೇಲೆ ಆಸಕ್ತಿಯಿರುವ ಮಕ್ಕಳಿಗೆ ಆಯಾ ಚಟುವಟಿಕೆ ಮಾಡಿಸಲಾಗುವುದು.
ಬೆಳಿಗ್ಗೆ 10:00 ರಿಂದ ಸಂಜೆ 5:00 ಗಂಟೆಯವರೆಗೆ ಶಿಬಿರ ಜರುಗುವುದು. ಶಿಬಿರದ ದಿನ ಮಕ್ಕಳು ಅನುಭವಿಸಿದ, ಕಲಿತ ಕಲೆಗಳ ಪ್ರದರ್ಶನವೂ ಇರುವುದು. ಹೆಚ್ಚಿನ ಮಾಹಿತಿಗೆ ಮೊ 9731727631 9743250624 ಸಂಪರ್ಕಿಸಬಹುದು.















Leave a Reply