Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶಿಕ್ಷಣದಿಂದ ಮಾತ್ರ ಸುಂದರ ಜೀವನ ಸಾಧ್ಯ

ಸಾವಳಗಿ:‘ಮಕ್ಕಳಿಗೆ ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರ ಕಲಿಸಿ. ಆಗ ಮಕ್ಕಳು ಸುಸಂಸ್ಕೃತರಾಗಿ ನಾಡಿನ ಸತ್ಪ್ರಜೆಗಳಾಗಿ ದೇಶದ ಪ್ರಗತಿಗೆ ಬೆನ್ನುಲುಬಾಗಿ ನಿಲ್ಲುತ್ತಾರೆ’ ಎಂದು ಸು ಸಂಸ್ಕೃತ ಸಂಸ್ಕಾರ ಸೇವಾ ಮಂಚ ಅಧ್ಯಕ್ಷ ಪಾರ್ಶ್ವನಾಥ ಉಪಾಧ್ಯೆ ಹೇಳಿದರು.

ಜಮಖಂಡಿ ತಾಲೂಕಿನ ನಗರದ ಮಾಳಿ ಭವನದಲ್ಲಿ ನಡೆದ ಶ್ರೀ ಗುರುಕುಲ ಪಬ್ಲಿಕ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಪಾಲಕರು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯ ಮೀಸಲಿಡುವುದು ಅವಶ್ಯ ಎಂದರು.

ನಂತರ ಮಾತನಾಡಿದ ಶ್ರೀ ಭವಾನಿ ಕೋ ಆಪ್ ಕ್ರೇಡಿಟ ಸೊಸಾಯಿಟಿ ಅಧ್ಯಕ್ಷ ಉಮೇಶ್ ಜಾಧವ್ ಅವರು ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಸಂಸ್ಕಾರದ ಪಠ್ಯದ ಜತೆಗೆ ಸ್ಪರ್ಧಾತ್ಮಕ ವಿಷಯಾಧಾರಿತ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ತಮ್ಮಣ್ಣಾಚಾರಿ ಜೋಷಿ ಅವರು ಆರ್ಶೀವಚನ ನೀಡಿ ವಿದ್ಯಾರ್ಥಿಗಳ ಜೀವನ ಉಜ್ವಲವಾಗಲಿ ಎಂದು ಆರ್ಶೀವಾದ ನೀಡಿದರು.

ಇದೇ ಸಂದರ್ಭದಲ್ಲಿ ಗುರುಕುಲ ಪಬ್ಲಿಕ್ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರವೀಣ್ ಲೋಹಾರ, ಶಾಲೆಯ ಅಧ್ಯಕ್ಷರು, ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಸದಾ ಹಸನ್ಮುಖಿಗಳಾಗಿ ಶಾಲಾ ಚಟುವಟಿಕೆಗಳಲ್ಲಿ ತೊಡಗಬೇಕು. ಶಿಕ್ಷಕರನ್ನು ಗೌರವಿಸುವ ಮೂಲಕ ಶಿಸ್ತು ಮೈಗೂಡಿಸಿಕೊಂಡು, ಶಿಕ್ಷಕರ ಮಾರ್ಗದರ್ಶನದಲ್ಲಿ ಏಕಾಗ್ರತೆಯಿಂದ ಓದಿ ಉನ್ನತ ಮಟ್ಟದ ಅಧಿಕಾರಿಗಳಾಗಬೇಕು.
ಸಿದ್ದನಗೌಡ ಪಾಟೀಲ್
ರಾಷ್ಟ್ರೀಯ ಅಧ್ಯಕ್ಷರು
ಕಿತ್ತೂರು ಕಲ್ಯಾಣ ಕರ್ನಾಟಕ ಸೇನೆ ಪಕ್ಷ

Leave a Reply

Your email address will not be published. Required fields are marked *