
ಕೋಟ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಮಣೂರು ನಾರಾಯಣ ಮಯ್ಯ (90)ಭಾನುವಾರ ಸ್ವಗೃಹದಲ್ಲಿ ವಯೋಸಹಜ ಖಾಯಿಲೆಯಿಂದ ನಿಧನರಾದರು.
ನಿವೃತ್ತ ಶಿಕ್ಷಕರಾಗಿ ವಿವಿಧ ಭಾಗಗಳಲ್ಲಿ ಸೇವೆಸಲ್ಲಿಸಿದ ಇವರು, ಹಿರಿಯ ಯೋಗ ಗುರುಗಳಾಗಿ , ಕೋಟದ ಸೇವಾಸಂಗಮ ಶಿಶುಮoದಿರದ ಗೌರವಾಧ್ಯಕ್ಷರಾಗಿ, ತೆಕ್ಕಟ್ಟೆ ಸೇವಾಸಂಗಮ ವಿದ್ಯಾಕೇಂದ್ರ ಇದರ ಸ್ಥಾಪಕ ಸದಸ್ಯರಾಗಿ. ,ಬ್ರಾಹ್ಮಣ ಮಹಾಸಭಾ ಮಣೂರು ಗ್ರಾಮಪ್ರತಿನಿಧಿಯಾಗಿ, ಕೂಟ ಮಹಾಜಗತ್ತು ಅಂಗ ಸಂಸ್ಥೆಯ ಸದಸ್ಯರಾಗಿ,ಮಣೂರು ಭಾಗದ ಹಿರಿಯ ಕೃಷಿಕರಾಗಿ,ಯಕ್ಷಗಾನ ಕಲಾವಿದರಾಗಿ ಹಲವು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.
ಒರ್ವ ಪುತ್ರಿ,ಇರ್ವರು ಪುತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಿತ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರು,ಸೇವಾಸoಗಮ ಟ್ರಸ್ಟ್ ವಿಶ್ವಸ್ಥ ಮಂಡಳಿ ಸಂತಾಪ ಸೂಚಿಸಿದ್ದಾರೆ.
Leave a Reply