ಮಾನವನಿಗೆ ನಡತೆ ಮತ್ತು ಉತ್ತಮ ಸಂಸ್ಕೃತಿ ಬಹಳ ಮುಖ್ಯ. ಅಬ್ರಹಾಂ ಲಿoಕನ್, ಸಚಿನ್ ತೆಂಡೂಲ್ಕರ್, ಅರುಣಿಮಾ ಸಿನ್ನ ಇವರ ಸಾಧನೆ ಪರಿಶ್ರಮ, ಜೀವನಗಾಥೆಗಳನ್ನು ಹೇಳುವುದರ ಮೂಲಕ ಕಷ್ಟ ಎದುರಿಸಿ ಸಾಧನೆ ಮಾಡುವುದು ಸಾಧ್ಯವಿದೆ. ಗ್ರಾಮೀಣ ವಿದ್ಯಾರ್ಥಿಗಳು ಇಂತಹ ಆತ್ಮವಿಶ್ವಾಸವನ್ನು ಮೂಲ ತಳಹದಿಯನ್ನಾಗಿ ಮಾಡಿಕೊಂಡು ಸುoದರವಾದ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಜೆಸಿ ವಲಯ
ತರಬೇತುದಾರ ಶ್ರೀ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಶಂಕರನಾರಾಯಣ ಇಲ್ಲಿ ಜೆಸಿಇ ಶಂಕರನಾರಾಯಣ ಇವರ ಸಹಯೋಗದಲ್ಲಿ ನಡೆದ ‘ವ್ಯಕ್ತಿತ್ವ ವಿಕಸನ’ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗಗಳನನ್ನು ಹಾಡುವ ಮೂಲಕ ಅವುಗಳ ಸಂದೇಶ, ಮಾನವನ ನಡತೆ, ಮಾತು, ಸಂಸ್ಕೃತಿ ಹೇಗಿರಬೇಕೆoದು ಪ್ರಭಾಕರ ಶೆಟ್ಟಿ ಕೊಂಡಳ್ಳಿಯವರು ತಿಳಿಸಿದರು. ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕಿ ಶ್ರೀಮತಿ ಕವಿತಾ ಎರ್ಮಾಳ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಸಮಾಜ ಸೇವೆ ಮಾಡುವುದರ ಮೂಲಕ ವಿದ್ಯಾರ್ಥಿಗಳು ಸೇವಾ ಮನೊಭಾವ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರತಿಯೊಬ್ಬ ವ್ಯಕ್ತಿಗಳಿಗೂ ಒಂದೊoದು ವ್ಯಕ್ತಿತ್ವವಿರುತ್ತದೆ ನಮ್ಮ ವ್ಯಕ್ತಿತ್ವದ ರೂವಾರಿಗಳು ನಾವೆ ಆಗಿರಬೇಕೆಂದು ಕಿವಿಮಾತು ಹೇಳಿದರು. ವಿದ್ಯಾರ್ಥಿನಿ ಅಕ್ಷತಾ ಪ್ರಾರ್ಥಿಸಿದರು. ಜೇೆಸಿ ಚೈತ್ರ ಪಿ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಜೇಸಿ ಯೋಗೀಶ್ ದೇವಾಡಿಗ ಪ್ರಸ್ತಾವನೆಗೈದರು ಡಾ. ಗಿರೀಶ್ ಶಾನ್‌ಬೋಗ್ ಸ್ವಾಗತಿಸಿದರು. ಜೇಸಿ ಪ್ರವೀಣ್ ಬಾಳೆಕೊಡ್ಲು ವಂದಿಸಿದರು. ಡಾ. ಗಂಗಾಧರ ಆರ್ ಎಚ್ ಕಾರ್ಯಕ್ರಮ ನಿರೂಪಿಸಿದರು.















Leave a Reply