Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕ್ಷಯ ಮುಕ್ತ ಕೋಟತಟ್ಟು ಗ್ರಾಮ ಪಂಚಾಯತ್‌ಗೆ ಜಿಲ್ಲಾಡಳಿತದ ಪ್ರಶಸ್ತಿ

ಕೋಟ: ಉಡುಪಿ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ 2025 ಅಂಗವಾಗಿ ಕ್ಷಯರೋಗ ನಿಯಂತ್ರಣದಲ್ಲಿರುವ ಗ್ರಾಮnಪಂಚಾಯತ್ ಪಾತ್ರ ಗುರುತಿಸಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಮತ್ತು ಉಡುಪಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್ ಯೋಗೇಶ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ ನಾಗಭೂಷಣ .ಹೆಚ್ ಕಂಚಿನ ಪ್ರಶಸ್ತಿಯನ್ನು ವಿತರಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಉಪಾಧ್ಯಕ್ಷರಾದ ಸರಸ್ವತಿ, ನಿಕಟ ಪೂರ್ವ ಅಧ್ಯಕ್ಷೆ ಅಶ್ವಿನಿ,
ಪ್ರಾಥಮಿಕಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮಾಧವ್ ಪೈ, ಆರೋಗ್ಯ ನಿರೀಕ್ಷಕರಾದ ಹರೀಶ್ ಹಾಗೂ ಸಿಎಚ್‌ಒ ಗಾಯತ್ರಿ ಉಪಸ್ಥಿತರಿದ್ದರು

ಕ್ಷಯ ಮುಕ್ತ ಗ್ರಾಮ ನಿರ್ಮಿಸುವಲ್ಲಿ ಈಗಾಗಲೇ ಅಗತ್ಯ ಪೌಷ್ಟಿಕ ಆಹಾರ ಕಿಟ್ ಅನ್ನು ಗ್ರಾಮ ಪಂಚಾಯತ್ ವತಿಯಿಂದ ವಿತರಿಸಲಾಗಿದ್ದು ಸಂಪೂರ್ಣ ಕ್ಷಯಮುಕ್ತ ಗ್ರಾಮ ನಿರ್ಮಿಸಲು ಇತರೆ ಅನೇಕ ಉಪಕ್ರಮಗಳನ್ನು
ಕೈಗೊಂಡು ಆರೋಗ್ಯ ಗ್ರಾಮ ನಿರ್ಮಿಸಲು ತನ್ಮೂಲಕ ಬೆಳ್ಳಿ ಹಾಗೂ ಚಿನ್ನದ ಪ್ರಶಸ್ತಿ ಪಡೆಯಲು
ಪ್ರಯತ್ನಿಸಲಾಗುವುದು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ ಕುಂದರ್ ತಿಳಿಸಿದರು.

ಉಡುಪಿ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ 2025 ಅಂಗವಾಗಿ ಕ್ಷಯರೋಗ ನಿಯಂತ್ರಣದಲ್ಲಿರುವ ಕೋಟತಟ್ಟು ಗ್ರಾಮ ಪಂಚಾಯತ್‌ಗೆ ಜಿಲ್ಲಾಡಳಿತದ
ಕಂಚಿನ ಪ್ರಶಸ್ತಿಯನ್ನು ಜಿಲ್ಲಾಪಂಚಾಯತ್ ಮುಖ್ಯ
ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್‌ಗೆ ವಿತರಿಸಿದರು.

Leave a Reply

Your email address will not be published. Required fields are marked *